ಹೊರಬಂತು ‘ಕಿರಿಕ್ ಪಾರ್ಟಿ’ ಟ್ರೈಲರ್

ಬೆಂಗಳೂರು. ಅ.28 :  ಕಾಲೇಜು ದಿನಗಳಲ್ಲಿ ಮಾಡಿದ ತರ್ಲೆಗಳು, ಹಾಸ್ಟೇಲ್ ಜೀವನ ಇತ್ಯಾದಿಗಳ ನೆನಪುಗಳನ್ನು  ಹೊತ್ತು ತಂದಿರುವ ರಕ್ಷಿತ್ ಶೆಟ್ಟಿ ಅಭಿನಯದ  ‘ಕಿರಿಕ್ ಪಾರ್ಟಿ’  ಚಿತ್ರದ ಟ್ರೈಲರ್ ಹೊರಬಿದ್ದಿದೆ.  ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಈ  ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು ಈ ಚಿತ್ರದಲ್ಲಿ ನಟ ರಕ್ಷಿತ್ ಶೆಟ್ಟಿ ಅವರ ಲುಕ್ ಕೂಡ ಬದಲಾಗಿದೆ. ಕಾಲೇಜ್ ಹುಡುಗರ ಕಿರಿಕ್ ಗಳು ಟ್ರೈಲರ್ ಲ್ಲಿ ಹೈಲೈಟ್ಸ್ ಆಗಿದ್ದು  ನಿರ್ದೇಶಕ ರಿಶಬ್ ಶೆಟ್ಟಿ ಈಗಿನ ಯುವಜನತೆಯ ಮನಸ್ಥಿತಿಗೆ ತಕ್ಕಂತೆ ಸಿನಿಮಾ ಮಾಡಿದಂತಿದೆ.ನೀವೂ ಕೂಡ ಈ ಟ್ರೈಲರ್ ನ್ನು ಒಮ್ಮೆ ನೋಡಿಬಿಡಿ.

Sri Raghav

Admin