ಹೊಸ ನೋಟಿನಲ್ಲಿ ಗಾಂಧೀಜಿ ಭಾವಚಿತ್ರವೇ ನಾಪತ್ತೆ..!

Spread the love

New-Notes

ಮೊರೈನಾ(ಮ.ಪ್ರ), ಏ.30-ನೋಟು ಅಮಾನೀಕರಣದ ನಂತರ ನಡೆಯುತ್ತಿರುವ ಅವಾಂತರಗಳು ಇನ್ನೂ ನಿಂತಿಲ್ಲ. ಮಧ್ಯಪ್ರದೇಶದ ಎಟಿಎಂವೊಂದರಿಂದ ಡ್ರಾ ಮಾಡಲಾದ 500 ಮುಖಬೆಲೆಯ ನೋಟಿನಲ್ಲಿ ಮಹಾತ್ಮಗಾಂಧೀಜಿಯವರ ಭಾವಚಿತ್ರವೇ ನಾಪತ್ತೆಯಾಗಿದೆ. ಮಹಾರಾಷ್ಟ್ರದ ಮೊರೈನಾ ಜಿಲ್ಲೆಯ ಶೋಯೇಪುರ್ ಗ್ರಾಮದ ಗೋವರ್ಧನ್ ಶರ್ಮಾ ಅವರು ಎಸ್‍ಬಿಐ ಎಟಿಎಂನಿಂದ ಏ.25ರಂದು ಸುಮಾರು 2 ಸಾವಿರ ರೂ. ಡ್ರಾ ಮಾಡಿದ್ದಾರೆ. 500 ರೂ. ಮುಖಬೆಲೆಯ ನೋಟುಗಳು ಎಟಿಎಂನಿಂದ ಹೊರಬಂದಿದ್ದು, ಈ ಎಲ್ಲಾ ನೋಟುಗಳಲ್ಲಿ ಮಹಾತ್ಮಗಾಂಧಿ ಭಾವಚಿತ್ರ ನಾಪತ್ತೆಯಾಗಿದೆ.ಈ ಗಾಂಧೀಜಿ ಭಾವಚಿತ್ರವಿಲ್ಲದ ನೋಟುಗಳನ್ನು ಅನಧಿಕೃತ ಎಂದು ಪರಿಗಣಿಸುವುದರಿಂದ ಗೋವರ್ಧನ್ ಶರ್ಮಾ ಕಂಗಾಲಾಗಿದ್ದಾರೆ. ತಕ್ಷಣವೇ ಎಟಿಎಂ ರಸೀದಿಯಲ್ಲಿದ್ದ ನಂಬರ್‍ಗೆ ಕರೆ ಮಾಡಿ ಬ್ಯಾಂಕ್‍ಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್ ಅಧಿಕಾರಿಗಳು ನೋಟುಗಳು ಅಸಲಿಯಾಗಿದ್ದು, ಮುದ್ರಣ ದೋಷದಿಂದ ಗಾಂಧೀಜಿ ಚಿತ್ರ ಕಾಣೆಯಾಗಿದೆ. ಗ್ರಾಹಕರಿಗೆ ತೊಂದರೆಯಾಗದಂತೆ ಈ ನೋಟುಗಳನ್ನು ಬದಲಾಯಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin