ಹೊಸ ವರ್ಷಕ್ಕೆ ರಾಷ್ಟ್ರಪತಿ, ಪ್ರಧಾನಿ ಸೇರಿಂದಂತೆ ಗಣ್ಯರ ಶುಭಾಶಯ

Spread the love

New-Year--01

ನವದೆಹಲಿ, ಜ.1-ಹೊಸ ವರ್ಷದ ಪ್ರಯುಕ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ದೇಶದ ಜನರಿಗೆ ಶುಭ ಕೋರಿದ್ದಾರೆ. ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು, ಡಾ.ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರುಗಳು, ಹಾಗೂ ವಿವಿಧ ಪ್ರಾದೇಶಿಕ ಪಕ್ಷಗಳ ಮುಖಂಡರು ಶುಭ ಹಾರೈಸಿದ್ಧಾರೆ.

ಸರ್ವರಿಗೂ ಹೊಸ ವರ್ಷದ ಶುಭಾಶಯಗಳು. 2018ರ ಹೊಸ ವರ್ಷವು ನಮ್ಮ ಎಲ್ಲ ಕುಟುಂಬಗಳು, ನಮ್ಮ ದೇಶ ಹಾಗೂ ನಮ್ಮ ವಿಶಿಷ್ಟ ಮತ್ತು ಸುಂದರ ಭೂಮಂಡಲದಲ್ಲಿ ಸುಖ, ಸಂತೋಷ ಮತ್ತು ನೆಮ್ಮದಿ ನೀಡಲಿ ಎಂದು ರಾಷ್ಟ್ರಪತಿ ಟ್ವಿಟ್ ಮಾಡಿದ್ದಾರೆ. ದೇಶವಾಸಿಗಳಿಗೆ ನೂತನ ವರ್ಷದ ಶುಭ ಕೋರಿರುವ ಮೋದಿ, 2018ರ ಹೊಸ ವರುಷವು ಪ್ರತಿಯೊಬ್ಬರ ಜೀವನದಲ್ಲೂ ಸಂತೋಷ, ಸಮೃದ್ಧಿ ಮತ್ತು ಉತ್ತಮ ಆರೋಗ್ಯ ಕರುಣಿಸುವಂತಾಗಲಿ ಎಂದು ಹೇಳಿದ್ದಾರೆ.

Facebook Comments

Sri Raghav

Admin