ಹೊಸ ವರ್ಷದಿಂದ ಎರಡೂವರೆ ಸಾವಿರ ರೂ.ಗೆ ಒಂದು ಟನ್ ಮರಳು

Sand-Import--01

ಬೆಂಗಳೂರು,ಅ.30-ರಾಜ್ಯವನ್ನು ಕಾಡುತ್ತಿರುವ ಮರಳಿನ ಕೊರತೆಯನ್ನು ನೀಗಿಸಲು ಮುಂದಾಗಿರುವ ಸರ್ಕಾರ ಇದೀಗ ವಿದೇಶಗಳಿಂದ ಮರಳನ್ನು ಆಮದು ಮಾಡಿಕೊಳ್ಳಲು ಖಾಸಗಿಯವರಿಗೂ ಅನುಮತಿ ನೀಡಿದ್ದು, ಹೊಸ ವರ್ಷದ ವೇಳೆಗೆ 2500 ರೂಗಳಿಗೆ ಟನ್ ಮರಳನ್ನು ಒದಗಿಸಲು ಸಜ್ಜಾಗಿದೆ. ಇಂದಿಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಈ ವಿಷಯ ತಿಳಿಸಿದರಲ್ಲದೆ,ಆರಂಭದಲ್ಲಿ ಎಂ.ಎಸ್.ಐ.ಎಲï ಮಾತ್ರ ವಿದೇಶಗಳಿಂದ ಮರಳನ್ನು ಆಮದು ಮಾಡಿಕೊಳ್ಳಲಿದೆ ಎಂದರು.

ಖನಿಜ ರಿಯಾಯ್ತಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು ಅದರಡಿ ಇನ್ನು ಖಾಸಗಿಯವರೂ ವಿದೇಶಗಳಿಂದ ಮರಳು ಆಮದು ಮಾಡಿಕೊಳ್ಳಲು ಅನುಮತಿ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಅವರೂ ಗಣಿ ಮತ್ತು ಭೂ ಗರ್ಭ ವಿಜ್ಞಾನ ಇಲಾಖೆಯಲ್ಲಿ ತಮ್ಮ ಹೆಸರು ನೋಂದಾನಿಸಿಕೊಳ್ಳಬಹುದು ಎಂದು ಅವರು ವಿವರ ನೀಡಿದರು. ಇದೀಗ ಕಾಯ್ದೆಗೆ ತಿದ್ದುಪಡಿ ತಂದಿದ್ದು ಮುಂದಿನ ಸಚಿವ ಸಂಪುಟ ಸಭೈಯಲ್ಲಿ ಚರ್ಚೆಗೆ ಬರಲಿದೆ ಎಂದ ಅವರು,ಈವರೆಗೆ ಎಂ.ಎಸ್.ಐ.ಎಲ್ ಮಾತ್ರ ವಿದೇಶಗಳಿಂದ ಮರಳು ಆಮದು ಮಾಡಿಕೊಳ್ಳುವ ಪ್ರಕ್ರಿಯೆ ನಡೆಸಿದ್ದು ವಿದೇಶಗಳಿಂದ ಮರಳು ತರಿಸಿಕೊಳ್ಳಲು ಪೂರಕವಾಗಿ ಟೆಂಡರï ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ ಎಂದರು.

ವಿದೇಶಗಳಿಂದ ಬರುವ ಮರಳಿಗೆ ತಲಾ ಹತ್ತು ಟನ್ ಮರಳಿಗೆ ಸಾಗಾಣಿಕೆ ವೆಚ್ಚವೂ ಸೇರಿದಂತೆ ಇಪ್ಪತ್ತು ಸಾವಿರ ರೂಗಳಾಗಲಿದೆ.ಅಂದರೆ ಪ್ರತಿ ಟನ್ ಮರಳನ್ನು ಗ್ರಾಹಕರಿಗೆ ತಲಾ ಎರಡೂವರೆ ಸಾವಿರ ರೂಗಳಿಗೆ ಒದಗಿಸಲು ಸಾಧ್ಯವಾಗಲಿದೆ ಎಂದರು. ಫಿಲಿಫೈನ್ಸ್, ಮಲೇಶಿಯಾ ಸೇರಿದಂತೆ ವಿವಿಧ ದೇಶಗಳಿಂದ ಮರಳಿನ ಸ್ಯಾಂಪಲ್  ತರಿಸಿಕೊಂಡಿರುವ ಎಂ.ಎಸ್.ಐ.ಎಲ್ ಮೊದಲ ಹಂತದಲ್ಲಿ ಮರಳನ್ನು ಆಮದು ಮಾಡಿಕೊಳ್ಳಲಿದ್ದು ಒಂದು ಹಡಗಿನಲ್ಲಿ ನಲವತ್ತು ಸಾವಿರ ಮೆಟ್ರಿಕ್ ಟನ್ ಗಳಷ್ಟು ಮರಳು ಆಮದಾಗಲಿದೆ ಎಂದರು.

ಕಾಯ್ದೆಗೆ ತಿದ್ದುಪಡಿ ತಂದು ಖಾಸಗಿಯವರೂ ವಿದೇಶಗಳಿಂದ ಮರಳನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಿರುವುದರಿಂದ ರಾಜ್ಯ ಈಗ ಎದುರಿಸುತ್ತಿರುವ ಮರಳಿನ ಕೊರತೆ ನೀಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ರೀತಿ ನದಿ ಪಾತ್ರಗಳಲ್ಲಿ ಸಿಗುತ್ತಿರುವ ಮರಳಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಎಂ.ಸ್ಯಾಂಡ್ (ಜಲ್ಲಿ ಪುಡಿ) ಮೂಲಕ ಬೇಡಿಕೆ ಮತ್ತು ಪೂರೈಕೆಯ ನಡುವಣ ಅಂತರವನ್ನು ಸರಿಪಡಿಸಲು ಸರ್ಕಾರ ಬಯಸಿತ್ತು.

ಇದೇ ಕಾರಣಕ್ಕಾಗಿ ಜಿಲ್ಲಾ ಮಟ್ಟಗಳಲ್ಲಿ ಟಾಸ್ಕ್ ಫೋರ್ಸ್‍ಗಳನ್ನು ರಚಿಸಲಾಗಿತ್ತು.ಆದರೆ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ ಗಳು ಎಂ.ಸ್ಯಾಂಡ್ ತಯಾರಿಸಲು ಮುಂದೆ ಬರುವವರ ಅರ್ಜಿಗಳನ್ನು ಸಮರ್ಪಕವಾಗಿ ಇತ್ಯರ್ಥಪಡಿಸುತ್ತಿಲ್ಲ.ಟಾಸ್ಕ್ ಫೋರ್ಸ ಗಳನ್ನು ರಚಿಸಿ ಎರಡು ವರ್ಷಗಳಾದರೂ ಕೇವಲ ಅರವತ್ತು ಜನರಿಗೆ ಮಾತ್ರ ಎಂ.ಸ್ಟಾಂಡ್ ï ಉತ್ಪಾದಿಸಲು ಅನುಮತಿ ನೀಡಲಾಗಿದೆ. ಉಳಿದಂತೆ ಏಳೆಂಟು ಸಾವಿರ ಅರ್ಜಿಗಳನ್ನು ಇತ್ಯರ್ಥ ಪಡಿಸದೆ ಹಾಗೆಯೇ ಉಳಿಸಿಕೊಳ್ಳಲಾಗಿದೆ.ಹೀಗಾಗಿ ಟಾಸ್ಕ್‍ ಫೋರ್ಸ್‍ಗಳ ಕೈಲಿದ್ದ ಅಧಿಕಾರವನ್ನು ಮರಳಿ ಗಣಿ ಮತ್ತು ಭೂಗರ್ಭ ವಿಜ್ಞಾನ ಇಲಾಖೆಗೇ ಹಸ್ತಾಂತರಿಸಲಾಗುವುದು ಎಂದರು.

Sri Raghav

Admin