ಹೊಸ ಸೂಕ್ಷ್ಮಜೀವಿಗೆ ಅಬ್ದುಲ್ ಕಲಾಂರ ಹೆಸರಿಟ್ಟು ಗೌರವ ಸಲ್ಲಿಸಿದ ನಾಸಾ

Abdul-Kalam--01

ಲಾಸ್ ಏಂಜಲೀಸ್ , ಮೇ 21-ಭಾರತೀಯರು ಹೆಮ್ಮೆ ಪಡುವ ಸಂಗತಿ ಇದು. ಎಲ್ಲರ ಪ್ರೀತಿ ಪಾತ್ರರಾಗಿದ್ದ ಭಾರತದ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಗೌರವಾರ್ಥ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ನಾಸಾ ಒಂದು ಹೊಸ ಸೂಕ್ಷ್ಮ ಜೀವಿಗೆ ಕಲಾಂ ಹೆಸರಿನಲ್ಲಿ ಸೋಲಿಬ್ಯಾಸಿಲಸ್ ಕಲಾಮಿ ಎಂದು ನಾಮಕರಣ ಮಾಡಿ ವಿನೂತನ ರೀತಿಯಲ್ಲಿ ಗೌರವ ಶ್ರದ್ದಾಂಜಲಿ ಸಲ್ಲಿಸಿದೆ.   ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್‍ಎಸ್)ದಲ್ಲಿ ಮಾತ್ರ ಕಂಡು ಬಂದಿರುವ ಪ್ರಯೋಜನಕಾರಿ ಬ್ಯಾಕ್ಟೀರಿಯಾವೊಂದಕ್ಕೆ ನಾಸಾ ಡಾ.ಅಬ್ದುಲ್ ಕಲಾಂ ಹೆಸರನ್ನು ನಾಮಕರಣ ಮಾಡಿದೆ.


ಈ ಸೂಕ್ಷ್ಮ ಜೀವಿ ಈ ತನಕ ಭೂಮಿಯಲ್ಲಿ ಕಂಡುಬಂದಿಲ್ಲ. ಐಎಸ್‍ಎಸ್‍ನಲ್ಲಿ ಇತ್ತೀಚೆಗೆ ಈ ಸೂಕ್ಷ್ಮಾಣುವನ್ನು ಬಾಹ್ಯಾಕಾಶ ವಿಜ್ಞಾನಿಗಳು ಪತ್ತೆ ಮಾಡಿದ್ದರು.
ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೋರೇಟರಿ(ಜೆಪಿಎಲ್)ಯ ಸಂಶೋಧಕರಿಗೆ ಈ ಸೂಕ್ಷ್ಮ ಜೀವಿ ಪತ್ತೆಯಾಗಿತ್ತು. ಇದಕ್ಕೆ ಖ್ಯಾತ ವೈಮಾಂತರಿಕ್ಷಾ ವಿಜ್ಞಾನಿಯೂ ಆದ ದಿವಂಗತ ಮಾಜಿ ರಾಷ್ಟ್ರಪತಿ ಅವರ ಗೌರವಾರ್ಥ ಈ (ಸೋಲಿಬ್ಯಾಸಿಲಸ್ ಕಲಾಮಿ) ಹೆಸರಿಟ್ಟಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin