ಹೋರಾಟಗಾರರಿಗೆ ಪೊಲೀಸರ ಕಿರುಕುಳ ಖಂಡಿಸಿ ರೈತರಿಂದ ಜೈಲ್ ಭರೋ ಚಳವಳಿ

Mahadayi-Protest

ನವಲಗುಂದ(ಧಾರವಾಡ), ಜ.23-ಮಹದಾಯಿ ಹೋರಾಟಗಾರರಿಗೆ ಪೊಲೀಸರು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ. ಅವರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹಾಕಿ ಜೈಲಿಗೆ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿ ಪಟ್ಟಣದಲ್ಲಿಂದು ಸಾವಿರಾರು ರೈತರು ಜೈಲ್ ಭರೋ ಚಳವಳಿ ನಡೆಸಿದರು, ಸುತ್ತಮುಲತ್ತಲ ಗ್ರಾಮಗಳಿಂದ ಬಂದ ಸಾವಿರಾರು ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಸ್ವಯಂಬಂಧನಕ್ಕೊಳಗಾದರು. ನಂತರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಹೋರಾಟಗಾರ ಲೋಕನಾಥ ಹೆಬಸೂರ ಅವರು, ವಿನಾಕಾರಣ ಪೊಲೀಸರು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಸುಳ್ಳು ಮೊಕದ್ದಮೆಗಳನ್ನು ದಾಖಲಿಸುತ್ತಿದ್ದಾರೆ. ಮೊದಲೇ ಭೀಕರ ಬರಗಾಲದಿಂದ ಕಂಗೆಟ್ಟ ರೈತರು ಸಂಸಾರ ನಡೆಸುವುದೇ ದುಸ್ತರವಾಗಿದೆ.

ಇಂತಹ ಸ್ಥಿತಿಯಲ್ಲಿ ಕಿರುಕುಳ ನೀಡುತ್ತಿರುವುದರಿಂದ ತುಂಬಾ ತೊಂದರೆಯಾಗಿದೆ. ಕಾರಣ ಸ್ವಯಂ ಪ್ರೇರಣೆಯಿಮದ ನಾವೇ ಬಂಧನಕ್ಕೊಳಗಾಗಲು ಮುಂದಾಗಿದ್ದೇವೆ. ನಾವು ಬಂಧನಕ್ಕೆ ಸಿದ್ಧ. ನಮ್ಮನ್ನು ಯಾವ ಜೈಲಿಗಾದರೂ ಕಳುಹಿಸಲಿ ಅದಕ್ಕೆ ಸಿದ್ಧವೆಂದು ಆಕ್ರೋಶದಿಂದ ನುಡಿದರು. ಕಳೆದ ಒಂದೂವರೆ ವರ್ಷದಿಂದ ನೀರಿಗಾಗಿ ಮನೆ, ಮಠ ಬಿಟ್ಟು ಬೀದಿಗಿಳಿದ್ಠು ಹೋರಾಟ ಮಾಡುತ್ತಿದ್ದೇವೆ ಇದು ತಪ್ಪೇ ಎಂದು ಪ್ರಶ್ನಿಸಿದರು. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯುವುದು. ಹೋರಾಟ ಹತ್ತಿಕ್ಕಲು ಕೆಲವು ಶಕ್ತಿಗಳು ಷಡ್ಯಂತ್ರ ನಡೆಸುತ್ತಿವೆ. ಅದಕ್ಕೆ ರೈತರು ಬಗ್ಗುವುದಿಲ್ಲ ಎಂದರು.

ಮಠಾಧೀಶರು, ಸುತ್ತಮುತ್ತಲ ಗ್ರಾಮಸ್ಥರು ಸೇರಿದಂತೆ ಸಾವಿರಾರು ಜನರು ಜೈಲ್ ಭರೋ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಬಿಗಿಯಾದ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Sri Raghav

Admin