ಹೋಳಿಯಾಡಿ ಸ್ನಾನಕ್ಕೆ ನದಿಗಿಳಿದ ಯುವಕ ನೀರು ಪಾಲು

Spread the love

Suicide-Water-02

ಕೊಪ್ಪಳ,ಮಾ.13– ಹೋಳಿ ಹಬ್ಬವನ್ನು ಆಚರಿಸಿ ಸ್ನಾನ ಮಾಡಲು ನದಿಗೆ ಇಳಿದಿದ್ದ ಯುವಕನೊಬ್ಬ ನೀರು ಪಾಲಾಗಿದ್ದು , ಇಂದು ಬೆಳಗ್ಗೆ ಶವ ಪತ್ತೆಯಾಗಿದೆ. ಅಳವಂದ ನಿವಾಸಿ ಬಸವರಾಜ ಮೆಳ್ಳ(24) ಮೃತಪಟ್ಟ ದುರ್ದೈವಿ. ನಿನ್ನೆ ತನ್ನ 10 ಮಂದಿ ಸ್ನೇಹಿತರೊಂದಿಗೆ ಹೋಳಿ ಹಬ್ಬವನ್ನು ಆಚರಿಸಿ ನಂತರ ಎಲ್ಲರು ತುಂಗಭದ್ರ ಹಿನ್ನೀರಿನಲ್ಲಿ ಸ್ನಾನ ಮಾಡಲೆಂದು ತೆರಳಿದ್ದಾರೆ. ಈ ವೇಳೆ ಬಸವರಾಜ ಮೆಳ್ಳ ನೀರು ಪಾಲಾಗಿದ್ದನು. ಸುದ್ದಿ ತಿಳಿದ ಕೂಡಲೇ ಅಳವಂಡಿ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳೀಯ ಬೋಟ್ ಮೂಲಕ ಶೋಧ ಕಾರ್ಯ ನಡೆಸಿದ್ದು , ಇಂದು ಬೆಳಗ್ಗೆ ಕೊಪ್ಪಳ ತಾ್ಲೂಕಿನ ನೇಗಿಲಪುರ ಬಳಿ ಇರುವ ನದಿಯಲ್ಲಿ ಶವಪತ್ತೆಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin