ಕೋಲಾರದಲ್ಲಿ ‘ಮೆಗಾ’ಮೂವಿ ‘ಕೈದಿ ನಂ.150’ ನೋಡಲು ನೂಕುನುಗ್ಗಲು, ಲಾಠಿಪ್ರಹಾರ

Movie
ಕೋಲಾರ, ಜ.11- ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಚಿತ್ರ ವೀಕ್ಷಣೆಗೆ ಟಿಕೆಟ್ ಪಡೆಯಲು ಉಂಟಾದ ನೂಕು-ನುಗ್ಗಲನ್ನು ನಿಯಂತ್ರಿಸಲು ಜಿಲ್ಲೆಯ ಏಳು ಚಿತ್ರಮಂದಿರಗಳಲ್ಲಿ ಲಘು ಲಾಠಿ ಪ್ರಹಾರ ನಡೆಸಲಾಗಿದೆ.  ಆಂಧ್ರ ಪ್ರದೇಶದ ಕುಪ್ಪ ಮತ್ತಿತರ ಕಡೆಗಳಿಂದ ಜಿಲ್ಲೆಗೆ ಆಗಮಿಸಿದ ಮಂದಿ ಇಲ್ಲಿನ ಚಿತ್ರಮಂದಿರಗಳಲ್ಲಿ ಚಿರಂಜೀವಿ ಅಭಿನಯದ ಕೈದಿ ನಂ.150 ಚಿತ್ರ ವೀಕ್ಷಣೆಗೆ ಬೆಳಗಿನಿಂದಲೇ ಚಿತ್ರಮಂದಿರದ ಬಳಿ ಕಾದು ನಿಂತಿದ್ದು, ಟಿಕೆಟ್ ನೀಡುವಾಗ ಉಂಟಾದ ಗದ್ದಲ ಮಿತಿಮೀರಿದಾಗ ಸ್ಥಳಕ್ಕಾಗಮಿಸಿದ ಪೊಲೀಸರು ಗಲಾಟೆ ನಿಯಂತ್ರಿಸಲು ಲಾಠಿ ಚಾರ್ಜ್ ನಡೆಸಿದ್ದಾರೆ. ಬಂಗಾರಪೇಟೆಯ ಬಾಲಚಂದರ್ ಚಿತ್ರಮಂದಿರದಲ್ಲಿ ಇಂದು ಚಿತ್ರ ಬಿಡುಗಡೆಯಾಗಿದ್ದು, ಮೊದಲ ದಿನವೇ ಚಿತ್ರ ವೀಕ್ಷಣೆಗೆ ಮುಗಿಬಿದ್ದಿದ್ದರು.

Chiranjeevi-2

ಟಿಕೆಟ್‍ಗಾಗಿ ಜನ ನುಗ್ಗಿದ್ದರಿಂದ ಸ್ಥಳದಲ್ಲಿ ನೂಕು-ನುಗ್ಗಲು ಉಂಟಾಗಿತ್ತು.  ಇದಲ್ಲದೆ, ಕೋಲಾರದ ಇತರ ಚಿತ್ರಮಂದಿರಗಳಲ್ಲೂ ಚಿತ್ರ ವೀಕ್ಷಣೆಗೆ ಜನ ಟಿಕೆಟ್‍ಗಾಗಿ ಸರದಿಯಲ್ಲಿ ಕಾಯದೆ ಫಸ್ಟ್ ಡೇ ಫಸ್ಟ್ ಶೋ ನೋಡಲು ಮುಂದಾಗಿದ್ದರಿಂದ ಗಲಾಟೆ ನಡೆದಿದೆ.
Chiranjeevi-3

Chiranjeevi-1

Sri Raghav

Admin