1.17 ಕೋಟಿ ರೂ. ಮೌಲ್ಯದ ಗಾಂಜಾ ವಶ, 6 ಜನರ ಬಂಧನ

Spread the love

Ganja-----0

ಅಹಮದಾಬಾದ್, ನ.10- ಗುಜರಾತ್‍ನ ಮಹಿಸಾಗರ್ ಜಿಲ್ಲೆಯಲ್ಲಿ ಆರು ಜನರನ್ನು ಬಂಧಿಸಿರುವ ಪೊಲೀಸರು 1.17 ಕೋಟಿ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಅಹಮದಾಬಾದ್‍ನಿಂದ 135 ಕಿ.ಮೀ. ದೂರದಲ್ಲಿರುವ ಶಾಂತ್‍ರಾಮ್‍ಪುರದ ತಮ್ಮ ತೋಟಗಳಲ್ಲಿ ಹತ್ತಿ ಬೆಳೆಗಳ ಮಧ್ಯೆ ಬೆಳೆಯಲಾಗುತ್ತಿದ್ದ ಗಾಂಜಾವನ್ನು ಪೊಲೀಸರು ಜಫ್ತಿ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಇದರ ಮೌಲ್ಯ 1.17 ಕೋಟಿ ರೂ.ಗಳು ಎಂದು ಮಹಿಸಾಗರ್ ಪೊಲೀಸ್ ವರಿಷ್ಠಾಧಿಕಾರಿ ಎನ್.ಕೆ.ಅಮಿನ್ ಹೇಳಿದ್ದಾರೆ.  ಕೋತಂಬಾ ಪ್ರದೇಶದಲ್ಲಿ ಇತ್ತೀಚೆಗೆ 47 ಲಕ್ಷ ರೂ. ಮೌಲ್ಯದ ಮಾರಿಜುವಾನ ಮಾದಕವಸ್ತುವನ್ನು ಸಹ ನಿನ್ನೆ ಪೊಲೀಸರು ವಶಪಡಿಸಿಕೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin