ಮುಂಬೈ,ಜ.4- ಸರ್ಕಾರಿ ಸ್ವಾಮ್ಯದ ಮೂರು ವಿದ್ಯುತ್ ಕಂಪೆನಿಗಳನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ, ಕಳೆದ 72 ಗಂಟೆಗಳಿಂದ ಮುಷ್ಕರ ನಡೆಸುತ್ತಿರುವ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಮಹಾರಾಷ್ಟ್ರ ಅಗತ್ಯ ಸೇವೆಗಳ ಕಾಯ್ದೆಯನ್ನು ಜಾರಿ ಮಾಡಲು ಸರ್ಕಾರ ಮುಂದಾಗಿದೆ.
ಮುಷ್ಕರದಿಂದ ವಿದ್ಯುತ್ ಪೂರೈಕೆಗೆ ಯಾವುದೇ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ. ಮೂರು ಸರ್ಕಾರಿ ಕಂಪೆನಿಗಳ ಸಾವಿರಾರು ಸಿಬ್ಬಂದಿಗಳು ಸರ್ಕಾರದ ಕ್ರಮಗಳನ್ನು ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಯೊಂದು ಶಾಖಾ ಕಚೇರಿಯ ಮುಂದೆಯೂ ಪೆಂಡಾಲ್ ಹಾಕಿ ಅಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ.
ಮುಷ್ಕರವನ್ನು ಅಂತ್ಯಗೊಳಿಸಲು ಸರ್ಕಾರ ಪ್ರಯತ್ನಗಳನ್ನು ಆರಂಭಿಸಿದೆ. ಉಪಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಇಂದು ಮಧ್ಯಾಹ್ನ ಮುಷ್ಕರ ನಿರತ ಸಕ್ರಿಯ ಸಮಿಸಿಯ ಜೊತೆ ಸಂಧಾನ ಸಭೆ ನಡೆಸಲಿದ್ದಾರೆ. ಒಂದು ವೇಳೆ ಸಂಧಾನ ಯಶಸ್ವಿಯಾಗದಿದ್ದರೆ ಅಗತ್ಯ ಸೇವೆಗಳ ಕಾಯ್ದೆಯನ್ನು ಜಾರಿ ಮಾಡಲು ನಿರ್ಧರಿಸಲಾಗಿದೆ.
ಭಾರತಕ್ಕೆ ಅಮೆರಿಕ ರಾಯಭಾರಿಯಾಗಿ ಎರಿಕ್ ಗಾರ್ಸೆಟ್ಟಿ ನೇಮಕ
ಮಹಾರಾಷ್ಟ್ರದಲ್ಲಿ ಅದಾನಿ ಗ್ರೂಪ್ಗೆ ಪರ್ಯಾಯ ವಿದ್ಯತ್ ಸರಬರಾಜು ಮಾರ್ಗದ ಪರವಾನಗಿ ನೀಡಲಾಗಿದೆ, ಅದನ್ನು ತಡೆ ಹಿಡಿಯಬೇಕು. ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಸ್ವಾಮ್ಯದ ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪೆನಿ, ಮಹಾರಾಷ್ಟ್ರ ರಾಜ್ಯ ವಿದ್ಯತ್ ಸಬರಾಜು ಕಂಪೆನಿ, ಮಹಾರಾಷ್ಟ್ರ ವಿದ್ಯುತ್ ಉತ್ಪಾದನಾ ಕಂಪೆನಿಗಳು ಸೇರಿ ಮೂರು ಸಂಸ್ಥೆಗಳ 31 ಸಂಘಟನೆಗಳು ಹೋರಾಟ ಆರಂಭಿಸಿವೆ.
ಮೀನುಗಾರಿಕಾ ದೋಣಿ ಮುಳುಗಡೆ, 15 ಜನರ ರಕ್ಷಣೆ
ಕಳೆದ ನವೆಂಬರ್ನಲ್ಲಿ ಮಹಾರಾಷ್ಟ್ರ ಸರ್ಕಾರ ಅದಾನಿ ಗ್ರೂಪ್ಗೆ ಮುಂಬೈನ ವಿವಿಧ ಭಾಗಗಳಿಗೆ ವಿದ್ಯುತ್ ಸರಬರಾಜು ಮಾಡಲು ಪರವಾನಗಿ ನೀಡಿದೆ. ಇದರಿಂದ ವಿದ್ಯುತ್ ಸರಬರಾಜು ವ್ಯವಸ್ಥೆ ಖಾಸಗಿ ಹಿಡಿತಕ್ಕೆ ಜಾರಲಿದೆ ಮತ್ತು ಹಂತ ಹಂತವಾಗಿ ಸರ್ಕಾರಿ ಸ್ವಾಮ್ಯದ ಕಂಪೆನಿಗಳು ಖಾಸಗಿಕರಣಗೊಳ್ಳಲಿವೆ ಎಂಬ ಆತಂಕಗಳು ವ್ಯಕ್ತವಾಗಿವೆ.
#StatePowerEmployees, #protest, #privatisation,