ಕೆಐಎಎಲ್ ನಿಲ್ದಾಣದಲ್ಲಿ 1.334 ಕೆಜಿಚಿನ್ನ ವಶ

Social Share

ಬೆಂಗಳೂರು, ಆ.4- ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ವಿಮಾನದಲ್ಲಿ ಬಂದ ಇಬ್ಬರು ಪ್ರಯಾಣಿಕರನ್ನು ಬಂಧಿಸಿ ಸೋಪಿನ ಮಾದರಿಯಲ್ಲಿದ್ದ 69.74 ಲಕ್ಷ ರೂ. ಮೌಲ್ಯದ 1 ಕೆಜಿ 334 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ.

ಶ್ರೀಲಂಕಾದಿಂದ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ವಿಮಾನ ಪ್ರಯಾಣಿಕರ ಲಗೇಜ್ಗಳನ್ನು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲಿಸುತ್ತಿದ್ದಾಗ ಸೋಪ್ ಮಾದರಿಯ ವಸ್ತು ಇರುವುದು ಕಂಡುಬಂದಿದೆ.

ತಕ್ಷಣ ಅದನ್ನು ಪರಿಶೀಲಿಸಿದಾಗ ಪ್ರಯಾಣಿಕರ ಸೋಗಿನಲ್ಲಿ ಇಬ್ಬರು ಶ್ರೀಲಂಕಾದಿಂದ ಚಿನ್ನ ಕಳ್ಳ ಸಾಗಣೆ ಮಾಡಿರುವುದು ಗೊತ್ತಾಗಿದೆ.

ತಕ್ಷಣ ಸೋಪಿನ ಮಾದರಿಯಂತಿದ್ದ ಚಿನ್ನದ ಗಟ್ಟಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿ ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ.

Articles You Might Like

Share This Article