ಟಿಎಂಸಿ ನಾಯಕ ಭಾದು ಶೇಖ್ ಹತ್ಯೆ, ಆರೋಪಿ ಅರೆಸ್ಟ್

Social Share
ಕೋಲ್ಕತ್ತಾ.ಅ, 20-ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಬೊಗ್ಟುಯಿ ಗ್ರಾಮದಲ್ಲಿ ನಡೆದ ಟಿಎಂಸಿ ನಾಯಕ ಭಾದು ಶೇಖ್ ಅವರ ಹತ್ಯೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಸಿಬಿಐ ಬಂಧಿಸಿದೆ. 
 ಶೇಖ್ ಮೇಲೆ ಕಚ್ಚಾ ಬಾಂಬ್ ಎಸೆದು ಹತ್ಯೆಮಾಡಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿರ್ಭೂಮ್ ಜಿಲ್ಲೆಯ ಮಲ್ಲರಪುರ ಪೊಲೀಸ್ ಠಾಣೆ ವ್ಯಾಪ್ತಿಯ ತೊಲೊಯಾ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಿ ರಾಮ್‍ಪುರಹಟ್‍ನ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆತನನ್ನು ಆರು ದಿನಗಳ ಸಿಬಿಐ ಕಸ್ಟಡಿಗೆ ನೀಡಲಾಗಿದೆ ಎಂದು ಅವರು ಹೇಳಿದರು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-10-2022)

ಇದಕ್ಕೂ ಮುನ್ನ ಮಾರ್ಚ್ 21ರ ರಾತ್ರಿ ನಡೆದ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ 10 ಮಂದಿಯನ್ನು  ಈಗಾಗಲೇ ಸಿಬಿಐ ಬಂಧಿಸಿದೆ.  ಶೇಖ್ ಅವರ ಹತ್ಯೆಯ ನಂತರ ಅವರ ಬೆಂಬಲಿಗರು ಬೊಗ್ಟುಯಿಯಲ್ಲಿನ ಮನೆಗಳ ಮೇಲೆ ಬಾಂಬ್ ದಾಳಿ ನಡೆಸಿದ ಪರಿಣಾಮ  10 ಜನರು ಬಲಿಯಾಗಿದ್ದರು.

 ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ ಪ್ರಕರಣದ ತನಿಖೆ ನಡೆಸುವ ಸಂದರ್ಭದಲ್ಲಿ ಕಲ್ಕತ್ತಾ ಹೈಕೋರ್ಟ್ ನಿರ್ದೇಶನದ ಮೇರೆಗೆ ಸಿಬಿಐ ತನಿಖೆಯನ್ನು ವಹಿಸಲಾಗಿತ್ತು. 

Articles You Might Like

Share This Article