ಬೆಂಗಳೂರು : 1 ಕೋಟಿ ಮೌಲ್ಯದ ಡ್ರಗ್ಸ್ ವಶ

Social Share

ಬೆಂಗಳೂರು,ಅ.30- ಕೇಂದ್ರ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾ ಚರಣೆ ನಡೆಸಿ ವಿದೇಶಿ ಪ್ರಜೆಗಳು ಸೇರಿದಂತೆ 11 ಮಂದಿ ಆರೋಪಿ ಗಳನ್ನು ಬಂಧಿಸಿ ಒಂದು ಕೋಟಿಗೂ ಹೆಚ್ಚು ಮೌಲ್ಯದ ಮಾದಕ ವಸ್ತು ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

ಅಶೋಕನಗರ, ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮೊಹಮ್ಮದ್ ಹರೂನ್, ಮೊಹಮ್ಮದ್ ಒರುವಿಲ, ಮೊಹಮ್ಮದ್ ಇಲಿಯಾಸ್, ಅಬ್ದುರ್ ಅಬು, ಅಹಮದ್ ಮೊಹಮ್ಮದ್ ಮೂಸಾ, ಮಾನ್ಶನ್ಶೀದ್, ಮೊಹಮ್ಮದ್ ಬಿಲಾಲ್ ,ಜನ್ ಪೌಲï, ಜೋಸೆಫ್ ಬೆಂಜಮಿನ್ ಹಾಗೂ ಇಸ್ಮಾಯಿಲ್ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್, ಕಣ್ಣೂರು ಶ್ರೀ ಅರೆಸ್ಟ್

ನೈಜೀರಿಯಾ, ಚಾಡ್, ಕೇರಳ ಮೂಲದ ಈ 11 ಮಂದಿ ಆರೋಪಿಗಳು ವಿವಿಧ ಕಾಲೇಜು ವಿದ್ಯಾರ್ಥಿಗಳು ಹಾಗೂ ಗಣ್ಯ ವ್ಯಕ್ತಿಗಳನ್ನು ಸಂಪರ್ಕಿಸಿ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದರು.

ವಿವಿಧ ಕಾರಣ ನೀಡಿ ವೀಸಾ ಪಡೆದು ಭಾರತಕ್ಕೆ ಬಂದಿದ್ದ ಆರೋಪಿಗಳು ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದರು. ಪ್ರಸ್ತುತ 1 ಕೋಟಿ 9 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ವೀಸಾ ಅವಧಿ ಮುಗಿದ ಬಳಿಕವೂ ನಕಲಿ ದಾಖಲಾತಿಗಳನ್ನು ಪಡೆದು ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ವಿವಿಧೆಡೆ ವಾಸವಾಗಿದ್ದರು.

ಚೆಕ್ ಪಡೆದು ಪ್ರಭಾವಿ ಹುದ್ದೆ ನೀಡಿದ್ದ ಸಿದ್ದರಾಮಯ್ಯ : N.R.ರಮೇಶ್ ಆರೋಪ

ಬಂಧಿತರಿಂದ ಗಾಂಜಾ, ಎಂಡಿಎಂಎ ಮಾತ್ರೆಗಳು, 2 ಕಾರುಗಳು, ಮೊಬೈಲ್ ಫೋನ್, ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ಶ್ರೀನಿವಾಸ್‍ಗೌಡ ಅವರು ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

Articles You Might Like

Share This Article