Sunday, October 6, 2024
Homeಜಿಲ್ಲಾ ಸುದ್ದಿಗಳು | District Newsಚಿನ್ನದ ವ್ಯಾಪಾರಿಗಳನ್ನು ಅಡ್ಡಗಟ್ಟಿ 1 ಕೋಟಿ ನಗದು, 250 ಕೆಜಿ ಬೆಳ್ಳಿ ದರೋಡೆ

ಚಿನ್ನದ ವ್ಯಾಪಾರಿಗಳನ್ನು ಅಡ್ಡಗಟ್ಟಿ 1 ಕೋಟಿ ನಗದು, 250 ಕೆಜಿ ಬೆಳ್ಳಿ ದರೋಡೆ

1 crore in cash, 250 kg of silver was robbed

ಕೊರಟಗೆರೆ, ಸೆ.29– ಮಹಾರಾಷ್ಟ್ರ-ಪೂನಾ ಮೂಲದ ಚಿನ್ನದ ವ್ಯಾಪಾರಿಗಳ ಕಾರನ್ನು ಅಡ್ಡಗಟ್ಟಿದ ದರೋಡೆಕೋರರು ಬೆದರಿಸಿ 1 ಕೋಟಿ ನಗದು, 250 ಕೆಜಿ ಬೆಳ್ಳಿಯನ್ನು ದರೋಡೆ ಮಾಡಿ ಕಾರನ್ನು ತೋವಿನಕೆರೆ ಬಳಿ ಬಿಟ್ಟು ಹೋಗಿದ್ದಾರೆ.

ಮಹಾರಾಷ್ಟ್ರದಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕೊಲ್ಲಾಪುರ ಮೂಲದ ನಾಲ್ವರು ಚಿನ್ನಾಭರಣ ವ್ಯಾಪಾರಿಗಳಿದ್ದ ಕಾರನ್ನು ಹಿಂಬಾಲಿಸಿದ ದರೋಡೆಕೋರರು ಕಳ್ಳಂಬೆಳ್ಳ ಟೋಲ್‌ ಬಳಿ ಅಡ್ಡಗಟ್ಟಿ ಕಾರು ಸಮೇತ ಅಪಹರಿಸಿ ಹಣ ಹಾಗೂ ಆಭರಣ ಲೂಟಿ ಮಾಡಿ ಕಾರನ್ನು ತೋವಿನಕೆರೆ ಬಳಿ ಬಿಟ್ಟು ಪರಾರಿಯಾಗಿದ್ದಾರೆ.

ದರೋಡೆ ಸಂದರ್ಭದಲ್ಲಿ ತಪ್ಪಿಸಿಕೊಂಡ ಇಬ್ಬರು ತುಮಕೂರು ಗ್ರಾಮಾಂತರ ಪೊಲೀಸ್‌‍ ಠಾಣೆಯಲ್ಲಿ ಘಟನೆ ಬಗ್ಗೆ ದೂರು ನೀಡಿದ್ದು, ಪೊಲೀಸ್‌‍ ವರಿಷ್ಠಾಽ ಕಾರಿ ಅಶೋಕ್‌, ಡಿವೈಎಸ್ಪಿ ಚಂದ್ರಶೇಖರ್‌, ಕೊರಟಗೆರೆ ಸಿಪಿಐ ಅನಿಲ್‌‍, ಪಿಎಸ್‌‍ಐ ಚೇತನ್‌ ಗೌಡ ಸ್ಥಳಕ್ಕೆ ಭೇಟಿ ನೀಡಿ ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

RELATED ARTICLES

Latest News