ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರನ ಎನ್‌ಕೌಂಟರ್‌

Social Share

ಶ್ರೀನಗರ, ನ.11- ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಭದ್ರತಾ ಪಡೆಗಳು ನಡೆಸಿದ ಎನ್‍ಕೌಂಟರ್‍ನಲ್ಲಿ ಬಯೋತ್ಪಾದಕ ಹತನಾಗಿದ್ದಾನೆ. ಉಗ್ರರನ್ನು ಕಮ್ರಾನ್ ಭಾಯ್ ಅಲಿಯಾಸ್ ಹನೀಸ್ ಎಂದು ಗುರುತಿಸಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಮುಂಜಾನೆ ಶೋಪಿಯಾನ್ ಜಿಲ್ಲಾಯ ಕಪ್ರೆನ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುವಾಗ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ನಂತರ ನಡೆದ ಎನ್‍ಕೌಂಟರ್‍ನಲ್ಲಿ ಬಯೋತ್ಪಾದಕ ಹತನಾಗಿದ್ದಾನೆ ಎಮದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಬೈ-ಗೋವಾ ಹೆದ್ದಾರಿಯ ಸೇತುವೆ ಕೆಳಗೆ ಸ್ಪೋಟಕ ಪತ್ತೆ

ಜೆ.ಎಂ ಭಯೋತ್ಪಾದಕ ಸಂಘಟನೆಯ ಸದಸ್ಯ ಕುಲ್ಗಾಮ-ಶೋಪಿಯಾನ್ ಪ್ರದೇಶದಲ್ಲಿ ಈತ ಸಕ್ರಿಯವಾಗಿದ್ದ ಎಂದು ಗೊತ್ತಾಗಿದೆ. ಈತ ಪಾಕ್ ಮುಲದವನಿರಬೇಕು ಎಂದು ಶಂಕಿಸಲಾಗಿದೆ.

ಮಾಲ್ಡೀವ್ಸ್‌ನಲ್ಲಿ ಅಗ್ನಿ ಅನಾಹುತ, 9 ಭಾರತೀಯರ ಸಾವು

ಇನ್ನೂ ಹಲವು ಉಗ್ರರು ಇದೇ ಪ್ರದೇಶದಲ್ಲಿ ಇರುವ ಸಾಧ್ಯತೆ ಇದ್ದು ಶೋಧ ನಡೆಯುತ್ತಿದೆ ಎಂದು ಕಾಶ್ಮೀರದ ಎಡಿಜಿಪಿ ವಿಜಯ್ ಕುಮಾರ್ ಟ್ವೀಟ್ ಮಾಡಿದ್ದಾರೆ

Articles You Might Like

Share This Article