ಬೇಗುಸರಾಯ್, ಸೆ 14 -ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ಬಂದೂಕುಧಾರಿಗಳು ಜನನಿಬಿಡ ಪ್ರದೇಶದಲ್ಲಿ ಮನಬಂದಂತೆ ಗುಂಡಿನ ದಾಳಿ ನಡೆಸಿದ ಪರಿಣಾಮ ಒಬ್ಬ ಸಾವನ್ನಪ್ಪಿ 11 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೇಯಲ್ಲಿ ನಡೆದಿದೆ.
ಬೇಗುಸರೈ ಪಟ್ಟಣದ ಮಲ್ಹಿಪುರ್‍ಚೌಕದಲ್ಲಿ ಈ ಘಟನೆ ನಡೆದಿದ್ದು, ಬಂದೂಕುಧಾರಿಗಳು ಅಂಗಡಿಗಳನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದ್ದಾರೆ, ಭಯಭೀತರಾದ ಜನರು ಪ್ರಾಣಾಪಾಯದಿಂದ ಸುರಷಿತ ಸ್ಥಳಕ್ಕೆ ಒಡಿದ್ದಾರೆ ಆದರೆ ಅಂಗಡಿಗಳ ಮಾಲೀಕರು ಬಚಿಟ್ಟುಕೊಂಡು ಜೀವ ಉಳಿಸಿಕೊಂಡರು ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯಲ್ಲಿ ಚಂದನ್ ಕುರ್ಮಾ ಎಂಬ 30 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-09-2022)
ದುಷ್ಕರ್ಮಿಗಳು ನಂತರ ಬರೌನಿ ಥರ್ಮಲ್ ಚೌಕ್, ಬರೌನಿ, ತೆಘ್ರಾ, ಬಚ್ವಾರಾ ಮತ್ತು ರಾಜೇಂದ್ರ ಸೇತುವೆ ಬಳಿಯೂ ಜನರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ವರಿಧಿಷ್ಠಾಕಾರಿ ಯೋಗೇಂದ್ರ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಗಾಯಾಳುಗಳಲ್ಲಿ ಕೆಲವರನ್ನು ಬೇಗುಸರಾಯನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನು ಕೆಲವರನ್ನು ಉತ್ತಮ ಚಿಕಿತ್ಸೆಗಾಗಿ ಪಾಟ್ನಾಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು. ಘಟನೆಯ ನಂತರ ಜಿಲ್ಲಾಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಹಲವು ಕೇಂದ್ರಗಳಲ್ಲಿ ಬ್ಯಾರಿಕೇಡ್ ಹಾಕಿ ನಾಕಾಬಂದಿ ಮಾಡಲಾಗಿದ್ದು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ. ಮತ್ತೆ ಬಿಹಾರದಲ್ಲಿ ಅಪರಾಧ ಚಟುವಟಿಗೆ ಶುರುವಾಗಿದ್ದು ನಿತೀಶ್ ಹೊಸ ಸರ್ಕಾರಕ್ಕೆ ತಲೆ ಬಿಸಿ ಹೆಚ್ಚಿದೆ.