ಅಗ್ನಿವೀರರಿಗೆ ಬಿಎಸ್‍ಎಫ್‍ನಲ್ಲೂ ಶೇ.10ರಷ್ಟು ಮೀಸಲಾತಿ

Social Share

ನವದೆಹಲಿ,ಮಾ.10- ಅಗ್ನಿಪತ್ ಯೋಜನೆಯಡಿ ಸೇನೆಗೆ ನೇಮಕಗೊಂಡು ನಾಲ್ಕು ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಅಗ್ನಿವೀರರಿಗೆ ಬಿಎಸ್‍ಎಫ್ ನೇಮಕಾತಿಯಲ್ಲಿ ಶೇ.10ರಷ್ಟು ಮೀಸಲಾತಿ ನೀಡುವುದು ಮತ್ತು ಗರಿಷ್ಠ ವಯೋಮಿತಿಯನ್ನು ಹೆಚ್ಚಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ.

ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಅಸೂಚನೆಯ ಪ್ರಕಾರ ಅರೆಸೇನಾಪಡೆಗಳಲ್ಲಿ ಅಗ್ನಿವೀರರಿಗೆ ಶೇ.10ಮೀಸಲಾತಿ ನೀಡಲಾಗುತ್ತಿದೆ. ದೈಹಿಕ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ.

ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ನೇಮಕಾತಿಗೆ ಕನಿಷ್ಠ 18ರಿಂದ ಗರಿಷ್ಠ 23 ವರ್ಷ ಮಿತಿಯನ್ನು ನಿಗದಿ ಮಾಡಲಾಗಿದೆ. 17ರಿಂದ 22 ವಯಸ್ಸಿನಲ್ಲಿ ಅಗ್ನಿವೀರರಾಗಿ ಸೇರ್ಪಡೆಯಾದ ಮೊದಲ ತಂಡದವರು ವಯೋಮಿತಿ ಸಡಿಲಿಕೆ ಪ್ರಯೋಜನ ಪಡೆಯಲಿದ್ದು, ಅಗ್ನಿವೀರರಾಗಿ ನಾಲ್ಕು ವರ್ಷ ಸೇವೆ ಪೂರೈಸಿದ ಬಳಿಕ ತಮ್ಮ 26ನೇ ವಯಸ್ಸಿನಲ್ಲೂ ಸಿಎಪಿಎಫ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಏಕಾಏಕಿ ಹೊತ್ತಿ ಉರಿದ ಬಿಎಂಟಿಸಿ ಬಸ್‍, ನಿರ್ವಾಹಕ ಸಜೀವ ದಹನ

ಒಂದು ವೇಳೆ ತಮ್ಮ 23ನೇ ವಯಸ್ಸಿನ ಗರಿಷ್ಠ ವಯೋಮಾನದಲ್ಲಿ ಅಗ್ನಿವೀರರಾಗಿ ಸೇರ್ಪಡೆಯಾದವರು ಅರೆಸೇನಾಪಡೆಗಳ ನೇಮಕಾತಿಗೆ ಗರಿಷ್ಠ ಐದು ವರ್ಷಗಳ ವಯೋಮಿತಿ ಸಡಿಲಿಕೆ ಪಡೆಯಲಿದ್ದಾರೆ. ತಮ್ಮ 28ನೇ ವಯಸ್ಸಿನಲ್ಲಿ ಸಿಎಪಿಎಫ್ ಮತ್ತು ಅಸ್ಸಾಂ ರೈಫಲ್ ಪಡೆಗೆ ಸೇರ್ಪಡೆಯಾಗಬಹುದಾಗಿದೆ.

ಅಗ್ನಿವೀರ್ ನೇಮಕಾತಿ ನಿಯಮಾವಳಿಗಳಿಗೆ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು. ಈ ಮೊದಲು ಒಮ್ಮೆ ಸೇನೆಗೆ ನೇಮಕವಾದರೆ ಕನಿಷ್ಠ 17 ವರ್ಷಗಳ ಸೇವೆ ಪೂರ್ಣಗೊಳಿಸಿ ನಿವೃತ್ತರಾಗಲು ಅವಕಾಶ ಇತ್ತು. ಸೇನೆಯಿಂದ ಹೊರ ಬಂದ ಬಳಿಕವೂ ಕೃಷಿ ಭೂಮಿ ಪಿಂಚಣಿ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗುತ್ತಿತ್ತು.

ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿ ಮಾಡಿ ಕಳೆದ ಮಾರ್ಚ್ 9ರಂದು ಅನುಷ್ಠಾನಕ್ಕೆ ತಂದಿದೆ. ಅದರ ಪ್ರಕಾರ ಭೂಸೇನೆ, ವಾಯು ಸೇನೆ, ನೌಕಾದಳಗಳಿಗೆ ನೇಮಕವಾದ ಅಗ್ನಿವೀರರು ನಾಲ್ಕು ವರ್ಷಗಳ ಸೇವೆ ಸಲ್ಲಿಸಬೇಕು.

BIG NEWS : ಕರ್ನಾಟಕ, ಹರಿಯಾಣದಲ್ಲಿ H3N2ಗೆ ಇಬ್ಬರು ಬಲಿ

ನಂತರ ಅವರಲ್ಲಿ ಶೇ.25ರಷ್ಟು ಮಂದಿಯನ್ನು ಸೇನೆಯಲ್ಲಿ ಮುಂದುವರೆಸಲಾಗುತ್ತದೆ, ಉಳಿದ ಶೇ.75ರಷ್ಟು ಅಗ್ನಿವೀರರನ್ನು ನಿವೃತ್ತಿಗೊಳಿಸಲಾಗುತ್ತದೆ. ಸೇನೆಯಿಂದ ಹಿಂದಿರುಗುವಾಗ ಸೇವಾವಯಲ್ಲಿ ಪಡೆದ ವೇತನ ಮತ್ತು ಕೇಂದ್ರ ಸರ್ಕಾರ ನೀಡುವ ಹಣ ಸೇರಿ 22 ಲಕ್ಷ ರೂಪಾಯಿಗಳಿಗೂ ಅಕ ಮೊತ್ತ ಅಗ್ನಿವೀರರ ಬಳಿ ಉಳಿಯಲಿದೆ.

ಕೇಂದ್ರ ಸರ್ಕಾರಕ್ಕೆ ಹೊರೆಯಾಗಿದ್ದ ಪಿಂಚಣಿ ವ್ಯವಸ್ಥೆಯನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ.
ಅಗ್ನಿಪತ್ ಯೋಜನೆಯಿಂದ ಸೇನೆಯ ಸಾಮಥ್ರ್ಯ ಕುಗ್ಗಲಿದೆ, ನಿವೃತ್ತ ಯೋಧರ ಉದ್ಯೋಗ ಭದ್ರತೆ ಸವಾಲಾಗಲಿದೆ ಎಂಬ ಟೀಕೆಗಳು ಕೇಳಿ ಬಂದಿವೆ. ಈ ಅಪವಾದವನ್ನು ನಿವಾರಿಸಲು ಕೇಂದ್ರ ಸರ್ಕಾರ ನಾನಾ ಕಸರತ್ತನ್ನು ನಡೆಸಿದೆ.

ಅಮೆರಿಕ ವಿದೇಶಾಂಗ ಇಲಾಖೆ ಹಂಗಾಮಿ ವಕ್ತಾರರಾದ ಪಟೇಲ್

ಅಗ್ನಿವೀರರ ನೇಮಕಾತಿಗೆ ಅರೆಸೇನಾ ಪಡೆಗಳಾದ ಸಿಆರ್‍ಪಿಎಫ್, ಅಸ್ಸಾಂ ರೈಫಲ್ಸ್, ಕೇಂದ್ರ ಸಶಸ್ತ್ರ ಪೊಲೀಸ್ ಮೀಸಲು ಪಡೆಗಳಲ್ಲಿ ಅಗ್ನಿವೀರರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಲಿದೆ. ಈ ಮೂಲಕ ಅರೆ ಸೇನಾಪಡೆಗಳಲ್ಲಿ ಖಾಲಿ ಇರುವ 75 ಸಾವಿರ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲು ಸಹಾಯವಾಗಲಿದೆ ಎಂದು ಹೇಳಲಾಗಿದೆ. ಈಗ ಬಿಎಸ್‍ಎಫ್‍ನ ನೇಮಕಾತಿಯಲ್ಲೂ ಮೀಸಲಾತಿ ನೀಡಿ, ಗರಿಷ್ಠ ವಯೋಮಿತಿ ಸಡಿಲಿಕೆ ಮಾಡಿ ಆದೇಶ ಹೊರಡಿಸಲಾಗಿದೆ.

10% reservation, ex-Agniveers, vacancies, within, BSF,

Articles You Might Like

Share This Article