ಹ್ಯಾಂಡ್‍ಲಾಕ್ ಮುರಿದು ಕಳ್ಳತನ : 10 ದ್ವಿಚಕ್ರ ವಾಹನಗಳ ಜಪ್ತಿ

Social Share

ಬೆಂಗಳೂರು, ಡಿ.21- ಮನೆಗಳ ಮುಂದೆ ನಿಲ್ಲಿಸಿದ್ದ ಮೋಟಾರ್‍ ಬೈಕ್‍ಗಳ ಹ್ಯಾಂಡ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿ 6 ಲಕ್ಷ ರೂ. ಬೆಲೆಬಾಳುವ ವಿವಿಧ ರೀತಿಯ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಮನಗರ ಜಿಲ್ಲೆ, ಕನಕಪುರ ತಾಲೂಕಿನ ಜೋಗಮನಸಹಳ್ಳಿ ನಿವಾಸಿ ಸೂರ್ಯ ಅಲಿಯಾಸ್ ಆರ್‍ಎಕ್ಸ್ ಸೂರಿ(22) ಬಂಧಿತ ಆರೋಪಿ. ಸೂರಜ್ ಎಂಬುವರು ತಮ್ಮ ಮನೆ ಬಳಿ ನಿಲ್ಲಿಸಿದ್ದ 75 ಸಾವಿರ ರೂ. ಬೆಲೆಬಾಳುವ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ಕಳ್ಳತನವಾಗಿರುವ ಬಗ್ಗೆ ಅನ್ನಪೂಣೇಶ್ವರಿ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿ ಸೂರ್ಯನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಹ್ಯಾಂಡ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದುದ್ದು ಗೊತ್ತಾಗಿದೆ.

ಶೀಘ್ರದಲ್ಲೇ ರಾಜ್ಯದಲ್ಲೂ ಕೊರೋನಾ ಮಾರ್ಗಸೂಚಿ ಬಿಡುಗಡೆ : ಸಚಿವ ಸುಧಾಕರ್‌

ಅಲ್ಲದೆ ಆತ ಗಾಂಜಾ ಸೇವನೆ ಮಾಡುತ್ತಿದ್ದುದ್ದು ವಿಚಾರಣೆಯಿಂದ ತಿಳಿದುಬಂದಿದೆ. ಆರೋಪಿಯ ಬಂಧನದಿಂದ ಅನ್ನಪೂರ್ಣೇಶ್ವರಿ ನಗರ ಠಾಣೆಯ ಮೂರು ಪ್ರಕರಣ, ಗಿರಿನಗರ ಠಾಣೆಯ ಒಂದು ಪ್ರಕರಣ ಪತ್ತೆಯಾಗಿದ್ದು, ಉಳಿದ ಆರು ವಾಹನಗಳ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಶಾಸಕರಿಗೆ ಏಕವಚನದಲ್ಲಿ ನಿಂದನೆ : ಸದನದಲ್ಲಿ ಗದ್ದಲ- ಕೋಲಾಹಲ

ಪಶ್ಚಿಮ ವಿಭಾಗದ ಉಪಪೊಲೀಸ್ ಆಯುಕ್ತ ಲಕ್ಷ್ಮಣ್ ಬಿ. ನಿಂಬರಗಿ ಅವರ ಸೂಕ್ತ ಮಾರ್ಗದರ್ಶನದಲ್ಲಿ ಕೆಂಗೇರಿ ಗೇಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕೋದಂಡರಾಮ್ ಅವರ ನಿರ್ದೇಶನದಲ್ಲಿ ಇನ್ಸ್‍ಪೆಕ್ಟರ್ ರಾಮಮೂರ್ತಿ ಅವರ ನೇತೃತ್ವದ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಸಿ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

10 two-wheelers, Theft, Accused arrested,

Articles You Might Like

Share This Article