ನೈಟ್‍ ಕರ್ಫ್ಯೂ ಉಲ್ಲಂಘಿಸಿದ 10 ವಾಹನ ವಶ

Social Share

ಬೆಂಗಳೂರು, ಜ.6- ವೀಕೆಂಡ್ ಕಫ್ರ್ಯೂ ಹತ್ತಿರವಾಗುತ್ತಿದ್ದಂತೆ ನಗರದಲ್ಲಿ ನೈಟ್‍ಕಫ್ರ್ಯೂವನ್ನು ಪೊಲೀಸರು ಮತ್ತಷ್ಟು ಬಿಗಿ ಗೊಳಿಸಿದ್ದು, ನಿನ್ನೆ ರಾತ್ರಿ 10 ವಾಹನಗಳನ್ನು ವಶಪಡಿಸಿ ಕೊಂಡಿದ್ದಾರೆ. ನೈಟ್‍ಕಫ್ರ್ಯೂ ಸಂದರ್ಭದಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ 9 ದ್ವಿಚಕ್ರ ವಾಹನಗಳು ಮತ್ತು ನಾಲ್ಕು ಚಕ್ರದ ಒಂದು ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಗರದಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜ.28 ರಿಂದ ಕಟ್ಟುನಿಟ್ಟಾಗಿ ನೈಟ್‍ಕಫ್ರ್ಯೂ ಜಾರಿಮಾಡಿದ್ದರೂ ಸಹ ಸವಾರರು ನಿಯಮ ಉಲ್ಲಂಘಿಸಿ ವಾಹನಗಳಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದುದನ್ನು ಪತ್ತೆಹಚ್ಚಿ ಇದುವರೆಗೂ 371 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಇವುಗಳಲ್ಲಿ ದ್ವಿಚಕ್ರ ವಾಹನ 324, ತ್ರಿಚಕ್ರ ವಾಹನ 11 ಹಾಗೂ 4 ಚಕ್ರದ 36 ವಾಹನಗಳು ಸೇರಿವೆ.

Articles You Might Like

Share This Article