ಶೃಂಗೇರಿಯಲ್ಲಿ 100 ಬೆಡ್‍ ಆಸ್ಪತ್ರೆ ನಿರ್ಮಾಣಕ್ಕೆ ಅಹೋರಾತ್ರಿ ಧರಣಿ

Social Share

ಬೆಂಗಳೂರು,ನ.25- ದಕ್ಷಿಣ ಭಾರತದ ಪ್ರಸಿದ್ದ ಧಾರ್ಮಿಕ ಶ್ರದ್ದಾ ಕೇಂದ್ರ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದಲ್ಲಿ 100 ಬೆಡ್‍ಗಳ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಾಣ ಮಾಡಬೇಕೆಂದು ಅಹೋರಾತ್ರಿ ಧರಣಿಯನ್ನು ಆರಂಭಿಸಲಾಗಿದೆ.

ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ವತಿಯಿಂದ ಶೃಂಗೇರಿಯ ಸಂತೆ ಮಾರುಕಟ್ಟೆ ಬಸ್ ನಿಲ್ದಾಣದ ಎದುರು ಇಂದಿನಿಂದ ಕ್ಷೇತ್ರದ ನೂರಾರು ಯುವಕರು ಪಕ್ಷಾತೀತವಾಗಿ ಅಹೋರಾತ್ರಿ ಧರಣಿಯನ್ನು ಆರಂಭಿಸಿದ್ದು, ತಕ್ಷಣವೇ ರಾಜ್ಯ ಸರ್ಕಾರ 100 ಬೆಡ್ ಆಸ್ಪತ್ರೆಯನ್ನು ನಿರ್ಮಿಸಲು ಆದೇಶ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಸರ್ಕಾರಿ ಕಚೇರಿ ದುರ್ಬಳಕೆ : ಜೀವರಾಜ್ ವಿರುದ್ಧ ಕ್ರಮಕ್ಕೆ ಮುರೊಳ್ಳಿ ಆಗ್ರಹ

ಶೃಂಗೇರಿ ಕ್ಷೇತ್ರವು ಮಲೆನಾಡಿನ ಪ್ರಮುಖ ಕೇಂದ್ರಬಿಂದುವಾಗಿದ್ದು, ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರಿಗೆ ಹೋಗಿ ಬರಲು ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಎನ್‍ಆರ್‍ಪುರ, ಕೊಪ್ಪ, ಕಳಸಾ ಸೇರಿದಂತೆ ಸುತ್ತಮುತ್ತಲಿನ ತಾಲ್ಲೂಕುಗಳಿಗೂ ಇದು ಅನುಕೂಲವಾಗಲಿದ್ದು, ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಧರಣಿ ನಿರತರು ಆಗ್ರಹಿಸಿದ್ದಾರೆ.

ಕೇಜ್ರಿವಾಲ್ ಹತ್ಯೆಗೆ ಸಂಚು ಆರೋಪ, ತನಿಖೆಗೆ ಬಿಜೆಪಿ ಆಗ್ರಹ

ಈ ಹಿಂದೆ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಆಶ್ವಾಸನೆ ನೀಡಲಾಗಿತ್ತು. ಇದು ಈಗಲೂ ಕೂಡ ಭರವಸೆಯಾಗಿಯೇ ಉಳಿದಿದೆ. ಸುಸಜ್ಜಿತ ಆಸ್ಪತ್ರೆ ಇಲ್ಲದಿರುವುದರಿಂದ ಸಾರ್ವಜನಿಕರ ಗೋಳಾಟವು ಹೇಳತೀರದಾಗಿದೆ. ನಮಗೆ ಭರವಸೆ ಬೇಡ, ತಕ್ಷಣವೇ ಆದೇಶ ಪತ್ರ ನೀಡಿ ಎಂದು ಧರಣಿ ಕುಳಿತಿದ್ದಾರೆ.

ಕುಡಿದು ಕೋರ್ಟ್‍ಗೆ ಬಂದ ಕಕ್ಷಿದಾರನಿಗೆ ದಂಡ

ಒಂದು ವೇಳೆ ರಾಜ್ಯ ಸರ್ಕಾರ ಇಲ್ಲವೇ ಜಿಲ್ಲಾ ಉಸ್ತುವಾರಿ ಸಚಿವರು ನ.27ರ ಬೆಳಗ್ಗೆ 9 ಗಂಟೆಯೊಳಗೆ ನಮ್ಮ ಬೇಡಿಕೆ ಈಡೇರಿಸದಿದ್ದರೆ ಅದೇ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಪ್ಪಕ್ಕೆ ಆಗಮಿಸಲಿದ್ದಾರೆ. ಹೋರಾಟ ಸಮಿತಿಯಿಂದ ಕೊಪ್ಪ ಚಲೋ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Sringeri, 100-bed, hospital, protest,

Articles You Might Like

Share This Article