ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ: ಬಿಡಿಎಯಿಂದ 100 ಕೋಟಿ ಮೌಲ್ಯದ ಜಾಗ ವಶ

Social Share

ಬೆಂಗಳೂರು, ಜ.4- ಬೆಂಗಳೂರು ಅಭಿವೃದ್ಧಿ ಪ್ರಾಧಿlandಕಾರ ತನ್ನ ಸ್ವತ್ತನ್ನು ಮರು ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಇಂದು ಬೆಳಗ್ಗೆ ರಾಜಾಜಿನಗರ 6ನೆ ಹಂತದಲ್ಲಿ ಪ್ರಸನ್ನ ಚಿತ್ರಮಂದಿರದ ಬಳಿ ಇದ್ದ 100 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ.
ಬೆಂಗಳೂರು ಅಭಿವೃದ್ಧಿ ಸಂಬಂಧ ಬಿಡಿಎ ಹಲವು ದಶಕಗಳ ಹಿಂದೆ ಸರ್ವೆ ಸಂಖ್ಯೆ 18/1 ರಿಂದ 18/10ರ ವರೆಗಿನ ಸುಮಾರು ಒಂದು ಎಕರೆ ಜಾಗವನ್ನು ಸ್ವಾೀಧಿನಪಡಿಸಿಕೊಂಡು ಭೂಮಾಲೀಕರಿಗೆ ಪರಿಹಾರವನ್ನೂ ನೀಡಿತ್ತು. ಆದರೆ, ಕೆಲವರು ಈ ಜಾಗದಲ್ಲಿ ಅಕ್ರಮವಾಗಿ ತಾತ್ಕಾಲಿಕ ಶೆಡ್, ಗ್ಯಾರೇಜ್‍ಗಳನ್ನು ನಿರ್ಮಾಣ ಮಾಡಿಕೊಂಡಿದ್ದರು. ಸದರಿ ಜಾಗವನ್ನು ತೆರವು ಮಾಡುವಂತೆ ಹಲವು ಬಾರಿ ನೊಟೀಸ್ ನೀಡಿದ್ದರೂ ತೆರವು ಮಾಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಮತ್ತು ಆಯುಕ್ತ ರಾಜೇಶ್ ಗೌಡ ಅವರ ಸೂಚನೆ ಮೇರೆಗೆ ಕಾರ್ಯಪಾಲಕ ಅಭಿಯಂತರರಾದ ಸುಷ್ಮಾ, ಎಸ್‍ಪಿ ಭಾಸ್ಕರ್, ಡಿವೈಎಸ್‍ಪಿ ರವಿಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬ¸್ತïನಲ್ಲಿ ತಾತ್ಕಾಲಿಕ ಶೆಡ್, ಗ್ಯಾರೇಜ್‍ಗಳನ್ನು ತೆರವುಗೊಳಿಸಿ ಜಾಗವನ್ನು ಬಿಡಿಎ ವಶಕ್ಕೆ ತೆಗೆದುಕೊಳ್ಳಲಾಯಿತು.
ಈ ಜಾಗದ ಪ್ರಸ್ತುತದ ಮೌಲ್ಯ 100 ಕೋಟಿ ರೂ.ಗೂ ಅಕವಾಗಿದೆ. ಈ ಕಾರ್ಯಾಚರಣೆಗೆ ಐದಕ್ಕೂ ಹೆಚ್ಚು ಜೆಸಿಬಿಗಳು, 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, 20ಕ್ಕೂ ಹೆಚ್ಚು ಬಿಡಿಎ ಅಧಿಕಾರಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿತ್ತು.

Articles You Might Like

Share This Article