ಮುಂಬೈ,ಫೆ.16- ಅಜಿತ್ ಪವಾರ್ ಅವರೊಂದಿಗೆ ಸೇರಿ ಸರ್ಕಾರ ರಚಿಸುವ ನಮ್ಮ ಯೋಜನೆಗೆ ಎನ್ಸಿಪಿ ಪಕ್ಷದ ಅಧ್ಯಕ್ಷ ಶರದ್ಪವಾರ್ ಅವರ ಸಂಪೂರ್ಣ ಬೆಂಬಲವಿತ್ತು ಎಂಬ ನನ್ನ ಹೇಳಿಕೆ ನೂರಕ್ಕೆ ನೂರರಷ್ಟು ಸತ್ಯ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪುನರುಚ್ಚರಿಸಿದ್ದಾರೆ.
ಮಹಾರಾಷ್ಟ್ರದ ಅತಿದೊಡ್ಡ ರಾಜಕೀಯ ಆಶ್ಚರ್ಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ 2019ರ ಘಟನೆಗೆ ಶರದ್ ಪವಾರ್ ಬೆಂಬಲ ನೀಡಿದ್ದರು.ಅಂದಿನ ಗವರ್ನರ್ ಭಗತ್ ಸಿಂಗ್ ಕೊಶ್ಯಾರಿ ಸಮ್ಮುಖದಲ್ಲಿ ನಾನು ಮುಖ್ಯಮಂತ್ರಿಯಾಗಿ ಮತ್ತು ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿಯಾಗಿ ನವೆಂಬರ್ 23, 2019 ರಂದು ಪ್ರಮಾಣವಚನ ಸ್ವೀಕರಿಸಿದ್ದೇವು.
ಆದರೆ ಈ ಸರ್ಕಾರ ಕೇವಲ ಮೂರು ದಿನಗಳ ಕಾಲ ನಡೆಯಿತು, ನಂತರ ಶಿವಸೇನೆಯ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. 2019 ರಲ್ಲಿ ಅಜಿತ್ ಪವಾರ್ ಅವರೊಂದಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಶರದ್ ಪವಾರ್ ಅವರ ಬೆಂಬಲವಿತ್ತು ಎಂದ ಫಡ್ನವಿಸ್ ಹೇಳಿದ್ದರು.
ಆದರೆ, ಈ ಆರೋಪವನ್ನು ನಿರಾಕರಿಸಿರುವ ಶರದ್ ಪವಾರ್ ಅವರು ಬಿಜೆಪಿ ನಾಯಕರು ಸುಳ್ಳಿನ ಮೇಲೆ ಕತೆ ಕಟ್ಟುತ್ತಿದ್ದಾರೆ ಎಂದು ಆರೋಪಿಸಿದ್ದರು.ಪವಾರ್ ಅವರ ನಿರಾಕರಣೆಗೆ ಸ್ಪಷ್ಟನೆ ನೀಡಿರುವ ಫಡ್ನವಿಸ್ ಅವರು, ನಾನು ಹೇಳಿದ್ದೆಲ್ಲ 100 ಪ್ರತಿಶತ ಸತ್ಯ, ಮತ್ತು ಅದರಲ್ಲಿ ಯಾವುದೇ ಸುಳ್ಳಿಲ್ಲ.ನಾನು ಇಂದು ಹುಟ್ಟಿಕೊಂಡಿರುವ ವಿವಿಧ ವ್ಯಾಖ್ಯಾನಗಳ ಬಗ್ಗೆ ಮಾತನಾಡುವುದಿಲ್ಲ. ನಾನು ಈ ಬಗ್ಗೆ ಹೆಚ್ಚು ಮಾತನಾಡಲು ಬಯಸುತ್ತೇನೆ, ಮತ್ತು ನಾನು ಸೂಕ್ತ ಸಮಯದಲ್ಲಿ ಮಾತನಾಡುತ್ತೇನೆ ಮತ್ತು ಆ ಸಮಯ ಇನ್ನೂ ಬರಬೇಕಿದೆ ಎಂದಿದ್ದಾರೆ.
ಶಿವಸೇನೆ ನೇತೃತ್ವದ ಸರ್ಕಾರ ರಚನೆಗೂ ಮುನ್ನ ಬಿಜೆಪಿಯೊಂದಿಗೆ ಕೈ ಜೋಡಿಸಿ ಸರ್ಕಾರ ರಚಿಸುವ ಕುರಿತಂತೆ ಶರದ್ ಪವಾರ್ ಅವರೊಂದಿಗೆ ಮಾತುಕತೆ ನಡೆದಿತ್ತು. ನಂತರ ಪರಿಸ್ಥಿತಿ ಬದಲಾಯಿತು ಎಂದಿದ್ದಾರೆ.
#100%True, #DevendraFadnavis, #DoublesDown, #Charge, #SharadPawar,