1067 ಭೂಮಾಪಕರ ಹುದ್ದೆಗಳ ನೇಮಕಕ್ಕೆ ಆದೇಶ : ಕಾಗೋಡು ತಿಮ್ಮಪ್ಪ

Kagodu-Timmappa----01

ಬೆಂಗಳೂರು,ಜೂ.7- ರಾಜ್ಯದಲ್ಲಿ 1067 ಭೂಮಾಪಕರ ಹುದ್ದೆ ನೇಮಕ ಮಾಡಿಕೊಳ್ಳಲು ಆದೇಶ ಹೊರಡಿಸಲಾಗಿದ್ದು , ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಶೀಘ್ರದಲ್ಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿಧಾನಪರಿಷತ್‍ನಲ್ಲಿ ಹೇಳಿದರು. ಭೂಮಾಪನ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಿವೃತ್ತ ಭೂಮಾಪಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಆಯ್ಕೆ ನಂತರ ತಾಲ್ಲೂಕುವಾರು ಅಳತೆ ಕಾರ್ಯಕ್ಕೆ ನಿಯೋಜಿಸಲಾಗುತ್ತದೆ ಎಂದರು.ಭೂಮಾಪಕರು ಪ್ರತಿ ತಿಂಗಳು 23 ಕಡತಗಳನ್ನು ವಿಲೇವಾರಿ ಮಾಡಲು ಸೂಚಿಸಲಾಗಿದೆ. 1067 ಹುದ್ದೆಗಳಲ್ಲದೆ ಹೆಚ್ಚಿನ ಭೂಮಾಪಕರ ಅವಶ್ಯತಕೆ ಇರುವುದರಿಂದ ಇಲಾಖೆಗೆ ಹೊಸದಾಗಿ ಸುಮಾರು ಒಂದು ಸಾವಿರ ಅರ್ಹ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ ಪರವಾನಗಿ ನೀಡಲು ಉದ್ದೇಶಿಸಿ 400 ಜನರಿಗೆ ತರಬೇತಿ ನೀಡಲಾಗಿದೆ ಎಂದರು.   ಕಂದಾಯ ಅದಾಲತ್‍ಗಳ ಮೂಲಕ ಆರ್‍ಟಿಸಿ ತಿದ್ದುಪಡಿ ಕೆಲಸವನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin