11 ವರ್ಷಗಳ ಅಜ್ಞಾತವಾಸದ ನಂತರ ಚಾಂಪಿಯನ್ಸ್ ಟ್ರೋಫಿಯಲ್ಲಿ ಯುವಿ
ನವದೆಹಲಿ, ಮೇ 11- ಸಿಕ್ಸರ್ಗಳ ಸರದಾರ, ಭಾರತದ ತಂಡದ ಮಾಧ್ಯಮ ಕ್ರಮಾಂಕದ ಆಧಾರಸ್ತಂಬವಾಗಿರುವ ಯುವರಾಜ್ಸಿಂಗ್ 11 ವರ್ಷಗಳ ಅಜ್ಞಾತವಾಸದ ನಂತರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಅವಕಾಶ ಪಡೆದಿದ್ದಾರೆ. ಜೂನ್ 4ರಂದು ಪಾಕಿಸ್ತಾನದ ವಿರುದ್ಧ ಆಡುವ 11ರ ಪಟ್ಟಿಯಲ್ಲಿ ಯುವಿಗೆ ಸ್ಥಾನ ಲಭಿಸುವುದು ಖಚಿತವಾಗುವ ಮೂಲಕ ಅವರ ಅಜ್ಞಾತವಾಸಕ್ಕೆ ತೆರೆ ಬೀಳಲಿದೆ. 2000ರಲ್ಲಿ ಕೀನ್ಯಾದಲ್ಲಿ ಆಯೋಜನೆಗೊಂಡಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳುವ ಮೂಲಕ ಪಾದಾರ್ಪಣೆ ಮಾಡಿದ್ದ ಯುವರಾಜ್ಸಿಂಗ್ 2006ರ ನಂತರ ಈ ಸರಣಿಯಿಂದ ಬಹುತೇಕ ದೂರವೇ ಉಳಿದಿದ್ದರು.
ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಾನ ಲಭಿಸಿದ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಯುವಿ, ಭಾರತ ತಂಡದಲ್ಲಿ ನನಗೆ ಸ್ಥಾನ ದೊರಕಿರುವುದು ತುಂಬಾ ಸಂತಸ ತಂದಿದೆ, ಕಳೆದ ಬಾರಿಯ ಚಾಂಪಿಯನ್ಸ್ ಆಗಿ ಹೊರಹೊಮ್ಮಿರುವ ಭಾರತ ತಂಡವು ಈ ಬಾರಿಯೂ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ನಾನು ಉತ್ತಮ ಪ್ರದರ್ಶನ ನೀಡುವುದಾಗಿ ತಿಳಿಸಿದ್ದಾರೆ.
6ನೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಶೋಯಿಬ್ ಮಲ್ಲಿಕ್:
ಇಂಗ್ಲೆಂಡ್ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳುವ ಮೂಲಕ ಪಾಕಿಸ್ತಾನದ ಬ್ಯಾಟ್ಸ್ಮನ್ ಶೋಯಿಬ್ ಮಲ್ಲಿಕ್ 6 ಬಾರಿ ಈ ಸರಣಿಯಲ್ಲಿ ಪಾಲ್ಗೊಳ್ಳುವ ಮೂಲಕ ದಾಖಲೆ ಬರೆದಿದ್ದಾರೆ. ಈ ಮುನ್ನ ರಿಕ್ಕಿ ಪಾಂಟಿಂಗ್ ( ಆಸ್ಟ್ರೇಲಿಯಾ), ರಾಹುಲ್ ದ್ರಾವಿಡ್ (ಭಾರತ), ಡೆನಿಯಲ್ ವಿಟ್ಟೋರಿ (ನ್ಯೂಜಿಲ್ಯಾಂಡ್), ಮಾರ್ಕ್ ಬೌಚರ್ , ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ) ಸನತ್ಜಯಸೂರ್ಯ , ಮಹೇಲ ಜಯವರ್ಧನೆ, ಕುಮಾರ ಸಂಗಾಕಾರ ( ಶ್ರೀಲಂಕಾ) ಮಾತ್ರ 6 ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಂಡಿದ್ದರು.
< Eesanje News 24/7 ನ್ಯೂಸ್ ಆ್ಯಪ್ >