11 ಆರೋಪಿಗಳ ಸೆರೆ : 4.33 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ

Social Share

ಬೆಂಗಳೂರು, ಮಾ. 15- ಕೇಂದ್ರ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳನ್ನು ಬಂಧಿಸಿ 23 ಪ್ರಕರಣ ಗಳನ್ನು ಪತ್ತೆ ಹಚ್ಚಿ 4.33 ಕೋಟಿ ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಹಲಸೂರು ಗೇಟ್: ಮನೆಗಳ್ಳತನ ಮಾಡುತ್ತಿದ್ದ ಆರೋಪಿ ಹಾಗೂ ಈತನಿಂದ ಕಳವು ಮಾಲನ್ನು
ಸ್ವೀಕರಿಸಿದ್ದ ಮತ್ತೊಬ್ಬನನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿ 70 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಚಿನ್ನದ ಗಟ್ಟಿ, ನಾಲ್ಕು ವಾಚ್‍ಗಳು, 100 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ವಾಲ್ಮೀಕಿ ನಗರದ 7ನೇ ಕ್ರಾಸ್ ನಿವಾಸಿ ಯಾಸೀನ್‍ಖಾನ್ ಅಲಿಯಾಸ್ ಇಮ್ರಾನ್‍ಖಾನ್ ಅಲಿಯಾಸ್ ಚೋರ್ ಇಮ್ರಾನ್(34) ಹಾಗೂ ಈತನಿಂದ ಕಳವು ಮಾಲನ್ನು ಸ್ವೀಕರಿಸುತ್ತಿದ್ದ ರಾಜಸ್ಥಾನ ಮೂಲದ ನೂರುಲ್ಲಾ ಮುಲ್ಲಾ ಅಹಮ್ಮದ್ ಸಲ್ಮಾನ್ ಅಲಿಯಾಸ್ ನೂರುಲ್ಲಾ ಮುಲ್ಲಾ ಬಂಧಿತ ಆರೋಪಿಗಳು.

ಆರೋಪಿ ಯಾಸೀನ್ ಖಾನ್ ರೂಢಿಗತ ಅಪರಾಯಾಗಿದ್ದು, ಈತನ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎರಡು ಹಗಲು ಕನ್ನಗಳವು ಪ್ರಕರಣಗಳು, ಎಸ್.ಆರ್. ನಗರ ಠಾಣೆಯಲ್ಲಿ ಒಂದು, ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ 2, ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಒಂದು, ಮಂಡ್ಯ ಜಿಲ್ಲೆ ಕೆಆರ್ ಪೇಟೆ ಠಾಣೆಯಲ್ಲಿ ಒಂದು ಹಗಲು ಕನ್ನಗಳವು ಸೇರಿ ಒಟ್ಟು 8 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.

ಯುಗಾದಿಗೆ ಊರಿಗೆ ಹೋಗಲು ಬೆಂಗಳೂರಿಗರು ಪರದಾಡುವುದು ಗ್ಯಾರಂಟಿ

ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಮತ್ತೊಂದು ಪ್ರಕರಣದಲ್ಲಿ ಆರೋಪಿ ಭಾಗಿಯಾಗಿದ್ದು, ಈತ ಕಳವು ಮಾಡಿದ ಆಭರಣಗಳನ್ನು ಮೂರ್ನಾಲ್ಕು ಬಾರಿ ಸ್ವೀಕರಿಸಿದ್ದರಿಂದ ನೂರುಲ್ಲ ಮುಲ್ಲಾ ಎಂಬಾತನನ್ನು ಸಹ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯಿಂದ 70 ಲಕ್ಷ ರೂ. ಮೌಲ್ಯದ ಒಂದು ಕೆಜಿ 522 ಗ್ರಾಂ ಚಿನ್ನದ ಆಭರಣಗಳು, ಚಿನ್ನದ ಗಟ್ಟಿ, ನಾಲ್ಕು ವಾಚ್‍ಗಳು, 100 ಗ್ರಾಂ ಬೆಳ್ಳಿ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಶೋಕ ನಗರ: ಅಶೋಕ ನಗರ ಠಾಣೆ ಪೊಲೀಸರು ಕಳವು ಪ್ರಕರಣದಲ್ಲಿ ಆರೋಪಿ ಜಾನ್ ಅಲಿಯಾಸ್ ಶಂಕರ್(45) ಎಂಬಾತನನ್ನು ಬಂಸಿ 8 ಪ್ರಕರಣಗಳಿಗೆ ಸಂಬಂಸಿದಂತೆ 14 ಲಕ್ಷ ರೂ. ಮೌಲ್ಯದ 223 ಗ್ರಾಂ ಚಿನ್ನ, 232 ಗ್ರಾಂ ಬೆಳ್ಳಿ ಹಾಗೂ 10 ಲಕ್ಷ ಮೌಲ್ಯದ ಹವಳ, 1.98 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.

ವಿವೇಕನಗರ: ಮನೆಗಳ್ಳತನ ಪ್ರಕರಣದಲ್ಲಿ ಬಾಗಿಯಾಗಿದ್ದ ಆರೋಪಿ ಶ್ರೀನಿವಾಸ್ ವೈ(43) ಎಂಬಾತನನ್ನು ಬಂಧಿಸಿ 15 ಲಕ್ಷ ರೂ. ಬೆಲೆಬಾಳುವ 301 ಗ್ರಾಂ ಚಿನ್ನಾಭರಣ, 45 ಸಾವಿರ ಬೆಲೆಬಾಳುವ ಬೆಳ್ಳಿ ಸಾಮಾನುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈತನಿಂದ ರೂಢಿಗತನಾಗಿ ಕಳ್ಳತನದ ಮಾಲುಗಳನ್ನು ಸ್ವೀಕರಿಸುತ್ತಿದ್ದ ಆರೋಪಿ ಭವರಲಾಲ್(48) ಎಂಬಾತನನ್ನು ಬಂಸಿ ಈತನ ಮಾಲೀಕತ್ವದ ಪೂಜಾ ಬ್ಯಾಂಕರ್ಸ್ ಅಂಗಡಿಯಲ್ಲಿಟ್ಟಿದ್ದ 60.4 ಗ್ರಾಂ ಚಿನ್ನ, 378 ಗ್ರಾಂ ತೂಕದ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ.

ಎಸ್‍ಜೆ ಪಾರ್ಕ್: ಗಸ್ತಿನಲ್ಲಿದ್ದ ಪೊಲೀಸರು ಅನುಮಾನಾಸ್ಪದವಾಗಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಬ್ಯಾಗ್‍ನಲ್ಲಿ ಪತ್ತೆಯಾದ 6.500 ಕೆಜಿ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಎಸ್‍ಜೆ ಪಾರ್ಕ್ ಠಾಣೆ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಹೋಂಡಾ ಆ್ಯಕ್ಟಿವಾ ದ್ವಿಕ್ರ ವಾಹನದಲ್ಲಿ ಅನುಮಾನಾಸ್ಪದವಾಗಿ ಬರುತ್ತಿದ್ದ ನಿಕುಂಜ್ ಕುಮಾರ್ ಬಾಬ್ಬಿಲ್(33) ಎಂಬಾತನನ್ನು ತಡೆದು ಆತನ ಬಳಿ ಇದ್ದ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿದ್ದ ಆಭರಣಗಳ ಬಗ್ಗೆ ಸೂಕ್ತ ಉತ್ತರ ನೀಡದ ಕಾರಣ ಆತನನ್ನು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ನರೇಗಾ ಯೋಜನೆ ಸ್ಥಗಿತಗೊಳಿಸುವ ಹುನ್ನಾರ : ಕೇಂದ್ರದ ವಿರುದ್ಧ ವ್ಯಾಪಕ ಆಕ್ರೋಶ

ಎಸ್‍ಆರ್ ನಗರ: ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಆರೋಪಿ ಕಂಬರ್ ಶಬ್ಬೀರ್ ಇರಾನಿ(26) ಎಂಬಾತನನ್ನು ಎಸ್‍ಆರ್ ನಗರ ಠಾಣೆ ಪೊಲೀಸರು ಬಂಧಿಸಿ 2.50 ಲಕ್ಷ ರೂ. ಬೆಲೆಬಾಳುವ ಚಿನ್ನದ ಬ್ರಾಸ್‍ಲೆಟ್, ಚಿನ್ನದ ಚೈನು, ಬೆಳ್ಳಿಯ ಉಂಗುರವನ್ನು ವಶಪಡಿಸಿಕೊಂಡಿದ್ದಾರೆ.

ವಿಲ್ಸನ್‍ಗಾರ್ಡನ್: ಮಹಿಳೆಯರ ಸರವನ್ನು ಅಪಹರಿಸಿ ಮಾರಾಟ ಮಾಡಿದ ಆರೋಪಿಗಳಾದ ಸೈಯದ್ ಸಬೀರ್(22) ಮತ್ತು ಅರಮಾನ್ ಅಲಿಯಾಸ್ ಅಪ್ಪಿ(21) ಎಂಬುವರನ್ನು ವಿಲ್ಸನ್‍ಗಾರ್ಡನ್ ಪೊಲೀಸರು ಬಂಧಿಸಿ 1.90 ಲಕ್ಷ ಬೆಲೆಬಾಳುವ 36 ಗ್ರಾಂ ತೂಕದ ಚಿನ್ನದ ಸರ, 2 ಲಕ್ಷ್ಮೀ ಕಾಸು, ಒಂದು ತಾಳಿ ಹಾಗೂ ಕೃತ್ಯಕ್ಕೆ ಬಳಸಿದ್ದ ಹೋಂಡಾ ಆ್ಯಕ್ಟಿವಾ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಶೇಷಾದ್ರಿಪುರಂ: ಕಾರಿನಲ್ಲಿ ಸಿಗರೇಟ್ ಸೇದುತ್ತಾ ಬರುತ್ತಿದ್ದಾಗ ಸಿಗರೇಟಿನ ಕಿಡಿ ಕಣ್ಣಿಗೆ ಬಿತ್ತೆಂದು ಆರೋಪಿ ಗಲಾಟೆ ಮಾಡಿ ನಂತರ ಆತ್ಮಿಯತೆಯಿಂದ ಮಾತನಾಡಿಸಿ ಅವರ ಕತ್ತಿನಲ್ಲಿದ್ದ ಚಿನ್ನದ ಸರ ನೋಡುತ್ತೇನೆಂದು ನಂಬಿಸಿ 20 ಗ್ರಾಂ ಸರದೊಂದಿಗೆ ಪರಾರಿಯಾಗಿದ್ದ ಆರೋಪಿ ರೂಪೇಶ್ ಸಿಂಗ್ ಅಲಿಯಾಸ್ ಸುರೇಶ್ ಎಂಬಾತನನ್ನು ಬಂಧಿಸಿ ಆತನಿಂದ ವೈಯಾಲಿಕಾವಲ್ ಪೊಲೀಸ್ ಠಾಣೆಯ ಪ್ರಕರಣ ಸೇರಿದಂತೆ ಒಟ್ಟು ಸುಮಾರು 3 ಲಕ್ಷ ರೂ. ಬೆಲೆಬಾಳುವ 70 ಗ್ರಾಂ ತೂಕದ ಚಿನ್ನದ ಗಟ್ಟಿಗಳನ್ನು ಜಫ್ತಿ ಮಾಡಿದ್ದಾರೆ.

ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರ ಕಬ್ಬಿಣದ ಬೀರುವನ್ನು ಯಾವುದೋ ಆಯುಧದಿಂದ ಹೊಡೆದು ಅದರಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿ ಪ್ರಶಾಂತ್ ಅಲಿಯಾಸ್ ಪಚ್ಚೆ(24) ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಯಶವಂತಪುರದ ಮಟ್ಟಂ ಫೈನಾನ್ಸ್‍ನಲ್ಲಿ ಅಡವಿಟ್ಟಿದ್ದ ಸುಮಾರು 2.50 ಲಕ್ಷ ರೂ. ಬೆಲೆಬಾಳುವ 72 ಗ್ರಾಂ ತೂಕದ ಚಿನ್ನದ ಆಭರಣ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ಪತ್ತೆ ಮಾಡಿ ಕಳವು ಮಾಲುಗಳನ್ನು ವಶಪಡಿಸಿಕೊಳ್ಳಲು ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯ ವೈಖರಿಯನ್ನು ನಗರ ಪೊಲೀಸ್ ಆಯುಕ್ತರು ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

11 Arrest , 4.33 crore, worth, gold ,seized,

Articles You Might Like

Share This Article