ಸೈಬರ್ ಅಪರಾಧ ತಡೆಗೆ ಮತ್ತಷ್ಟು ಕಠಿಣ ಕ್ರಮ ಅಗತ್ಯ

Social Share

ನವದೆಹಲಿ,ಫೆ.11- ಸಾಂಪ್ರದಾಯಿಕ ಪೊಲೀಸ್ ನೇಮಕಾತಿಗಳ ಜೊತೆಯಲ್ಲಿ ಸೈಬರ್ ಅಪರಾಧಗಳ ನಿಯಂತ್ರಣಕ್ಕೆ ಪರಿಣಿತ ತಜ್ಞರನ್ನು ನೇಮಿಸಬೇಕು ಎಂದು ಗೃಹ ವ್ಯವಹಾರಗಳ ಸ್ಥಾಯಿ ಸಮಿತಿ ಶಿಫಾರಸ್ಸು ಮಾಡಿದೆ. ಸಂಸದ ಆನಂದ್ ಶರ್ಮ ಅವರ ನೇತೃತ್ವದ ಸಮಿತಿ ಪೊಲೀಸ್ ತರಬೇತಿ, ಆಧುನೀಕರಣ ಮತ್ತು ಸುಧಾರಣೆಗಳ ಕುರಿತು ವರದಿಯನ್ನು ನೀಡಿದೆ.
ರಾಜ್ಯಗಳು ಸೈಬರ್ ಅಪರಾಧಗಳ ಹಾಟ್‍ಸ್ಪಾಟ್‍ಗಳಾಗುತ್ತಿವೆ. ಮೊದಲು ಇದನ್ನು ಗುರುತಿಸಬೇಕು. ಅಪರಾಧಗಳ ತಡೆಗೆ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪಂಜಾಬ್, ರಾಜಸ್ಥಾನ, ಅಸ್ಸಾಂನಂತಹ ರಾಜ್ಯಗಳಲ್ಲಿ ಸೈಬರ್ ಅಪರಾಧ ತನಿಖೆಗೆ ಒಂದೇ ಪೊಲೀಸ್ ಠಾಣೆ ಇದೆ.
ಆಂಧ್ರಪ್ರದೇಶ, ಕರ್ನಾಟಕ ಮತ್ತು ಉತ್ತರ ಪ್ರದೇಶದಲ್ಲಿ ಠಾಣೆಗಳ ಸಂಖ್ಯೆ ಹೆಚ್ಚಿಸಲಾಗಿದೆ. ಆದರೆ ಅದು ಸಾಲುತ್ತಿಲ್ಲ. ಜಿಲ್ಲಾ ಕೇಂದ್ರಗಳಲ್ಲಿ ಸೈಬರ್ ಠಾಣೆಗಳನ್ನು ಸ್ಥಾಪಿಸಬೇಕು ಎಂದು ಸಮಿತಿ ಸಲಹೆ ನೀಡಿದೆ.
2017ರಲ್ಲಿ 21796, 2018ರಲ್ಲಿ 27248, 2019ರಲ್ಲಿ 44535, 2020ರಲ್ಲಿ 50035 ಪ್ರಕರಣಗಳು ವರದಿಯಾಗಿವೆ. ಲೈಂಗಿಕ ಶೋಷಣೆ, ಸುಲಿಗೆಯಂತಹ ದುಷ್ಕøತ್ಯಗಳು ವ್ಯಾಪಕವಾಗುತ್ತಿವೆ. ಇವುಗಳನ್ನು ತಡೆಯಲು ಮತ್ತಷ್ಟು ಗಂಭೀರ ಕ್ರಮಗಳ ಅಗತ್ಯವಿದೆ ಎಂದು ಸಮಿತಿ ಶಿಫಾರಸ್ಸು ಮಾಡಿದೆ.

Articles You Might Like

Share This Article