ಛಾಪ್ರಾ (ಬಿಹಾರ), ಆ. 6-ರಾಜ್ಯದ ಸರನ್ ಜಿಲ್ಲಾಯ ಫುಲ್ವಾರಿಯಾ ಪ್ರದೇಶದ ಕೆಲ ಗ್ರಾಮದಲ್ಲಿ ಕಳ್ಳಬಟ್ಟಿ ಮದ್ಯ ಸೇವಿಸಿ 11ಜನರು ಸಾವನ್ನಪ್ಪಿ ಸುಮಾರು 12 ಮಂದಿ ತೀವ್ರ ಅಸ್ವಸ್ಥಗೊಂಡು ಅವರಲ್ಲಿ ಹಲವರು ದೃಷ್ಟಿ ಕಳೆದುಕೊಂಡಿದ್ದಾರೆ.
ಕಳ್ಳಬಟ್ಟಿ ಮದ್ಯ ತಯಾರಿಕೆ ಮತ್ತು ಮಾರಾಟದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಐವರನ್ನು ಬಂಧಿಸಲಾಗಿದ್ದು, ಮೇಕರ್ ಪೊಲೀಸ್ ಠಾಣೆ ಠಾಣೆಯ ಇಬ್ಬರು ಪೇದೆಗಳನ್ನು ಅಮಾನತುಗೊಳಿಸಲಾಗಿದೆ ಎಂದು ಇಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಕಳ್ಳಬಟ್ಟಿ ಕುಡಿದು ಇಬ್ಬರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಬಂದ ತಕ್ಷಣ ಪೊಲೀಸ, ಅಬಕಾರಿ ಮತ್ತು ವೈದ್ಯಕೀಯ ಅಧಿಕಾರಿಗಳ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಮತ್ತು ಅಸ್ವಸ್ಥರಾದವರನ್ನು ಇಲ್ಲಿನ ಸದರ್ ಆಸ್ಪತ್ರೆಗೆ ಮತ್ತು ಕೆಲವರನ್ನು ಪಾಟ್ನಾದ ಪಿಎಂಸಿಎಚ್ ಆಸ್ಪತ್ರೆಗೆ ರವಾನಿಸಲಾಯಿತು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಶ್ ಮೀನಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಾಟ್ನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಒಂಬತ್ತು ಮಂದಿ ಸಾವನ್ನಪ್ಪಿದರು,ಇಲ್ಲಿ ಮತ್ತು ಇನ್ನೂ 12 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರಾವಣ ಮಾಸದ ಹಬ್ಬದಂದು ಹಳ್ಳಿಗಳಲ್ಲಿ ಮದ್ಯ ಸೇವಿಸುವ ಸಂಪ್ರದಾಯವಿದೆ ಆದರಂತೆ ಆಗಸ್ಟ 3 ರಂದು ಉತ್ಸವ ನಡೆದಿದ್ದು, ಸ್ಥಳೀಯರು ನಕಲಿ ಮದ್ಯ ಹಂಚಲಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 2016 ರಲ್ಲಿ ನಿತೀಶ್ ಕುಮಾರ್ ಸರ್ಕಾರವು ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿತು. ಆದರೆ ಕಳೆದ ವರ್ಷ ನವೆಂಬರ್‍ನಿಂದ ರಾಜ್ಯದಲ್ಲಿ ಕಳ್ಳಬಟ್ಟಿ ದುರಂತಗಳು ನಡೆಯುತ್ತಿದೆ ಸುಮಾರು 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.