ತ್ರಿಪುರ ಸಂಪುಟ ವಿಸ್ತರಣೆ : 11 ಮಂದಿ ಸಚಿವರ ಪ್ರಮಾಣ ವಚನ ಸ್ವೀಕಾರ

Spread the love

ಅಗರ್ತಲಾ, ಮೇ 15- ನಾಯಕತ್ವ ಬದಲಾವಣೆಯ ಬಳಿಕ ತ್ರಿಪುರದ 11 ಮಂದಿ ಶಾಸಕರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಬಿಜೆಪಿಯ ಒಂಬತ್ತು ಮತ್ತು ಐಪಿಎಫ್‍ಟಿಯ ಇಬ್ಬರು ಸೇರಿ 11 ಮಂದಿ ಸಂಪುಟ ಸೇರಿದ್ದಾರೆ. ಐಪಿಎಫ್‍ಟಿಯ ಮೇವರ್ ಕುಮಾರ್ ಜಮಾತಿಯಾ ಅವರನ್ನು ಹೊರತುಪಡಿಸಿ ಬಿಪ್ಲಬ್ ಕುಮಾರ್ ದೇಬ್ ಸಂಪುಟದ ಎಲ್ಲಾ ಸಚಿವರಿಗೆ ಹೊಸ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.

ಮುಖ್ಯಮಂತ್ರಿ ಮಾಣಿಕ್ ಶಾ, ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ರಾಜಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಎಸ್‍ಎನ್ ಆರ್ಯ ಅವರು ಸಂಪುಟ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಬಿಜೆಪಿಯ ಜಿಷ್ಣು ದೇವ್ ವರ್ಮಾ, ರತನ್ ಲಾಲ್ ನಾಥ್, ಪ್ರಣಜಿತ್ ಸಿಂಗ್ ರಾಯ್, ಮನೋಜ್ ಕಾಂತಿ ದೇಬ್, ಸಂತಾನಾ ಚಕ್ಮಾ, ರಾಮ್ ಪ್ರಸಾದ್ ಪಾಲ್, ಭಗಬನ್ ದಾಸ್, ಸುಶಾಂತ ಚೌಧುರಿ, ರಾಮಪಾದ ಜಮಾತಿಯಾ, ಐಪಿಎಫ್‍ಟಿಯ ಎನ್ಸಿ ದೆಬ್ಬರ್ಮಾ, ಪ್ರೇಮ್ ಕುಮಾರ್ ರಿಯಾಂಗ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಬಿಪ್ಲಬ್ ದೇಬ್‍ರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಒಂದು ದಿನದ ಬಳಿಕ ಮಾಣಿಕ್ ಸಹಾ ತ್ರಿಪುರಾ ಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು.

ಬಿಜೆಪಿಯ ಹಿರಿಯ ಬುಡಕಟ್ಟು ನಾಯಕ ರಾಮಪಾದ ಜಮಾತಿಯಾ ಅವರನ್ನು ಸಂಪುಟ ಸಚಿವರ ಪಟ್ಟಿಯಲ್ಲಿ ಸೇರಿಸಲಾಗಿದೆ. ಐಪಿಎಫ್‍ಟಿ ಶಾಸಕ ಪ್ರೇಮ್ ಕುಮಾರ್ ರಿಯಾಂಗ್ ಕೂಡ ಹೊಸ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.

Facebook Comments