ಅಂತ್ಯವಾಯ್ತು ವಿಮಾನ ಹೈಜಾಕ್ ಹೈಡ್ರಾಮಾ ..!

Spread the love

Plane-hijack

ಮಾಲ್ಟಾ,ಡಿ.23- 118 ಜನರಿದ್ದ ಲಿಬಿಯಾದ ವಾಣಿಜ್ಯ ವಿಮಾನವೊಂದನ್ನು ಶುಕ್ರವಾರ ಹೈಜಾಕ್ ಮಾಡಲಾಗಿದ್ದು, ವಿಮಾನ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಹೈಜಾಕ್ ಹೈಡ್ರಾಮಾ ಸುಖಕರವಾಗಿ ಅಂತ್ಯಗೊಂಡಿದ್ದು, ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ.  ಇಬ್ಬರು ಅಪಹರಣಕಾರರು ಲಿಬಿಯಾ ವಿಮಾನವನ್ನು ಮಾಲ್ಟಾದಲ್ಲಿ ಇಳಿಯುವಂತೆ ಮಾಡಿದ್ದಾರೆ. ಅವರ ಬಳಿ ಗ್ರೆನೇಡ್ ಗಳಿದ್ದು, ವಿಮಾನವನ್ನು ಸ್ಫೋಟಿಸುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದ್ದು. ವಿಮಾನದಲ್ಲಿದ್ದ 109 ಪ್ರಯಾಣಿಕರನ್ನು ನಂತರ ಬಿಡುಗಡೆಗೊಳಿಸಿದ್ದಾರೆ.

ಲಿಬಿಯಾ ಹಾಗೂ ಸಾಬಾ, ಟ್ರಿಪೋಲಿ ಮಧ್ಯೆ ಸಂಚರಿಸುತ್ತಿದ್ದ ಆಫಿಕಿಯಾ ಏರ್ ವೇಸ್ ನ ವಿಮಾನ A320ಯನ್ನು ಅಪಹರಿಸಿದ್ದು, ಅದರಲ್ಲಿ 118 ಮಂದಿ ಪ್ರಯಾಣಿಕರಿದ್ದು ಅವರಲ್ಲಿ 109 ಪ್ರಯಾಣಿಕರನ್ನು ಬಿಡುಗಡೆಗೊಳಿಸಿದ್ದಾರೆ.

ಮಾಲ್ಟಾದ ಸ್ಥಳೀಯ ಕಾಲಮಾನ ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿಮಾನ ಭೂಸ್ಪರ್ಶ ಮಾಡಿದೆ. ಭದ್ರತಾ ಪಡೆಗಳು ವಿಮಾನವನ್ನು ಸುತ್ತುವರೆದಿದ್ದು, ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಲ್ಟಾದ ಮಾಧ್ಯಮ ವರದಿ ಮಾಡಿತ್ತು.  ಇನ್ನು ವಿಮಾನ ಅಪಹರಣವಾಗಿರುವ ಕುರಿತು ಮಾಲ್ಟಾದ ಪ್ರಧಾನಿ ಜೋಸೆಫ್ ಮಸ್ಕತ್ ಟ್ವೀಟ್ ಮಾಡಿದ್ದು, ಅಪಹರಣದ ವರದಿಯನ್ನು ಖಚಿತಪಡಿಸಿದ್ದಾರೆ. ಅಲ್ಲದೆ ಎಲ್ಲಾ ಪ್ರಯಾಣಿಕರನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

 

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin