ಬೆಂಗಳೂರು, ಡಿ.26- ಕಳವು ಹಾಗೂ ಮೋಸದಿಂದ ಕಾರುಗಳನ್ನು ಪಡೆದು ವಂಚಿಸುತ್ತಿದ್ದ ಆರೋಪಿ ಸೇರಿದಂತೆ ಇಬ್ಬರನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿ 8 ಕೋಟಿ 92 ಲಕ್ಷ ರೂ. ಬೆಲೆಬಾಳುವ 12 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರುಗಳನ್ನು ಮಾರಾಟ ಮಾಡಿ ಹಣ ಕೊಡುವುದಾಗಿ ನಂಬಿಸಿ ಮಾಲೀಕರನ್ನು ಯಾಮಾರಿಸುತ್ತಿದ್ದ ಪ್ರಮುಖ ಆರೋಪಿ ಜಬ್ರಾನ್ ಹಾಗೂ ಕಳವು ಮಾಲೆಂದು ಗೊತ್ತಿದ್ದರೂ ಈತನಿಂದ ಕಾರು ಪಡೆದುಕೊಂಡಿದ್ದ ಹೇಮೀಚಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಸತೀಶ್ ಎಂಬುವರು ಜನವರಿ 9ರಂದು ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಕಬ್ಬನ್ ಪಾರ್ಕ್ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ಬೆಂಜ್ ಕಾರು ಕಳವಾಗಿತ್ತು. ಈ ಬಗ್ಗೆ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದೇ ವ್ಯಾಪ್ತಿಯಲ್ಲಿ ನ. 2ರಂದು ತಮಿಳುನಾಡು ರಾಜ್ಯದ ಚೆನ್ನೈ ನಗರದ ನಿವಾಸಿಯಾದ ರಾಜ ಎಂಬುವರು ಕೆಜಿ ಹಳ್ಳಿಯಲ್ಲಿ ವಾಸವಿರುವ ಆರೋಪಿ ರೇಂಜ್ ರೋವರ್ ಸ್ಪೋಟ್ರ್ಸ್ ಕಾರು ಮಾರಾಟ ಮಾಡಿ ಕೊಡುವುದಾಗಿ ನಂಬಿಸಿ ಪಡೆದುಕೊಂಡು ವಾಪಸ್ ಕಾರು ಹಿಂದಿರುಗಿಸದೆ ಮೋಸ ಮಾಡಿರುತ್ತಾನೆಂದು ದೂರು ನೀಡಿದ್ದರು.
ಅಧಿವೇಶನ ಆರಂಭವಾಗಿ ವಾರಕಳೆದರೂ ನಿಲ್ಲದ ಸಾಲು ಸಾಲು ಪ್ರತಿಭಟನೆಗಳು
ಈ ಎರಡು ಪ್ರಕರಣಗಳ ಸಂಬಂಧ ಕಳುವಾದ ವಾಹನ ಹಾಗೂ ಮೋಸದಿಂದ ಕಾರು ಪಡೆದುಕೊಂಡು ಹಿಂದಿರುಗಿಸದ ಆರೋಪಿಗಳನ್ನು ಪತ್ತೆ ಮಾಡಲು ಕೇಂದ್ರ ವಿಭಾಗದ ಉಪಪೊಲೀಸ್ ಆಯುಕ್ತ ಶ್ರೀನಿವಾಸ್ ಗೌಡ ಮತ್ತು ಸಹಾಯಕ ಪೊಲೀಸ್ ಆಯುಕ್ತ ರಾಜೇಂದ್ರ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಚೈತನ್ಯ ಅವರ ನೇತೃತ್ವದ ವಿಶೇಷ ತಂಡವನ್ನು ರಚಿಸಲಾಗಿತ್ತು.
ಈ ತಂಡದ ಅಧಿಕಾರಿ ಹಾಗೂ ಸಿಬ್ಬಂದಿ ಮಾಹಿತಿಯನ್ನು ಕಲೆಹಾಕಿ ಕೆಜಿ ಹಳ್ಳಿಯ ಆರೋಪಿ ಹಾಗೂ ಈತನಿಂದ ಕಾರನ್ನು ಖರೀದಿಸಿದ ಮತ್ತೊಬ್ಬನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಆರೋಪಿಯನ್ನು ಕೂಲಂಕುಶವಾಗಿ ವಿಚಾರಣೆ ನಡೆಸಿದಾಗ ರಾಜ ಎಂಬುವರಿಗೆ ಮೋಸ ಮಾಡಿ ವಾಹನವನ್ನು ಪಡೆದುಕೊಂಡಂತೆ ಇನ್ನು ಹಲವರಿಗೆ ಅದೇ ರೀತಿ ಮೋಸ ಮಾಡಿ ವಾಹನಗಳನ್ನು ತಂದು ಬೇರೆಯವರಿಗೆ ಮಾರಾಟ ಮಾಡಿದ್ದಾಗಿ ತಿಳಿಸಿದ್ದಾನೆ.
ಆರೋಪಿಯಿಂದ 50 ಲಕ್ಷ ಬೆಲೆಯ ಮರ್ಸಿಡಿಸ್ ಬೆಂಜ್ ಕಾರು, 2 ಕೋಟಿ ಬೆಲೆಯ ರೇಂಜ್ ರೋವರ್ ಕಂಪೆನಿಯ 2 ಕಾರು, 3.5 ಕೋಟಿ ಬೆಲೆಯ ಅಸ್ಟೀನ್ ಮಾರ್ಟಿನ್ ಕಂಪೆನಿಯ ಕಾರು, 20 ಲಕ್ಷ ಬೆಲೆಬಾಳುವ ಮಹೀಂದ್ರ ತಾರ್ ಕಂಪೆನಿಯ ಕಾರು, 75 ಲಕ್ಷ ಬೆಲೆಬಾಳುವ ಅಡಿ ಕ್ಯೂ-7 ಕಂಪೆನಿಯ ಕಾರು, 40 ಲಕ್ಷ ಬೆಲೆಯ ಫೋರ್ಡ್ ಎಂಡವರ್ ಕಂಪೆನಿಯ ಕಾರು, 20 ಲಕ್ಷ ಬೆಲೆಯ ಕಿಯಾ ಸೆಲ್ಟಾಸ್ ಕಾರು,
10 ಲಕ್ಷ ಬೆಲೆಬಾಳುವ ಇನೋವಾ ಕಾರು, 15 ಲಕ್ಷ ಬೆಲೆಯ ಹುಂಡೈ ಐ-20 ಕಾರು ಹಾಗೂ 7 ಲಕ್ಷ ಬೆಲೆಯ ಮಾರುತಿ ಸುಜಕಿ ಬೊಲೇನಾ ಕಾರುಗಳು ಹಾಗೂ ಕಳವು ಮಾಲೆಂದು ತಿಳಿದ್ದಿದ್ದರೂ ಕಡಿಮೆ ಬೆಲೆಗೆ ಆರೋಪಿಯಿಂದ ಪಡೆದುಕೊಂಡಿದ್ದ ಮತ್ತೊಬ್ಬನನ್ನು ಬಂಧಿಸಿ 50 ಲಕ್ಷ ಬೆಲೆಬಾಳುವ ಬೆಂಜ್ ಕಾರು ಸೇರಿದಂತೆ ಒಟ್ಟು 8 ಕೋಟಿ 92 ಲಕ್ಷ ಬೆಲೆಬಾಳುವ 12 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಶಾಲಾ ಮೈದಾನದಲ್ಲೇ ಇಬ್ಬರು ಯುವಕರ ಭೀಕರ ಕೊಲೆ..
ಇದೊಂದು ವ್ಯವಸ್ಥಿತ ಜಾಲ: ಇದೊಂದು ವ್ಯವಸ್ಥಿತ ಜಾಲವಾಗಿದ್ದು, ಆರೋಪಿಗೆ ಇತರೆ ಆರೋಪಿಗಳ ಜೊತೆ ಸಂಪರ್ಕ ಇರುವುದನ್ನು ಪತ್ತೆ ಹಚ್ಚಬೇಕೆಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರುಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳನ್ನು ಬಂಧಿಸಲು ಹೊರ ರಾಜ್ಯದಲ್ಲಿ ಶೋಧ ನಡೆಸಬೇಕೆಂದು ಅವರು ಸೂಚಿಸಿದರು.
ಐಷಾರಾಮಿ ಕಾರು ಮಾಲೀಕರಿಗೆ ಎಷ್ಟು ಹಣ ಕೊಟ್ಟು ಕಾರನ್ನು ಮಾರಾಟ ಮಾಡಿ ಕೊಡುವುದಾಗಿ ಯಾಮಾರಿಸುತ್ತಿದ್ದರು. ಯಾವ ರೀತಿ ಮಾಲೀಕರಿಗೆ ಆಮಿಷವೊಡ್ಡಿ ಮೋಸ ಮಾಡುತ್ತಿದ್ದರು. ಮಾಲೀಕರು ಹೇಗೆ ಅವರ ಮಾತನ್ನು ನಂಬುತ್ತಿದ್ದರು ಎಂಬುದು ಆಶ್ಚರ್ಯವಾಗಿದೆ. ಇದೊಂದು ವ್ಯವಸ್ಥಿತ ಜಾಲ ಇದ್ದಂತಿದೆ.
ಕಾರು ಮಾಲೀಕರನ್ನು ಮನವೊಲಿಸುವ ಶೈಲಿ ವಿಚಿತ್ರವಾಗಿದೆ ಎಂದು ಆಯುಕ್ತರು ಪತ್ರಿಕಾ ಗೋಷ್ಠಿಯಲ್ಲಿ ವಿವರಿಸಿದರು. ಆರೋಪಿ ಹೊರ ರಾಜ್ಯದವರ ಸಂಪರ್ಕ ಇಟ್ಟುಕೊಂಡಿದ್ದಾನೆ. ಇವರ ಜಾಲ ವಿಸ್ತಾರವಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿರುವುದಾಗಿ ಆಯುಕ್ತರು ತಿಳಿಸಿದರು.
12 cars, Seizure, 8.92 crore, Two arrested,