ಬೆಂಗಳೂರು, ಡಿ.16- ಮತದಾರರ ಮಾಹಿತಿ ಕದ್ದ ಚಿಲುಮೆ ಸಂಸ್ಥೆ ಹಗರಣ ಸಂಬಂಧ ಇದೀಗ ಬಿಬಿಎಂಪಿ ಬರೋಬ್ಬರಿ 12 ಕೆಎಎಸ್ ಶ್ರೇಣಿ ಅಧಿಕಾರಿಗಳನ್ನು ನೇಮಿಸಿ ಪರಿಷ್ಕರಣೆ ಪ್ರಕ್ರಿಯೆಗೆ ಮುಂದಾಗಿದೆ. ಈ ಕುರಿತು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಈಗಾಗಲೇ 12 ಕೆಎಎಸ್ ಅಧಿಕಾರಿಗಳ ನೇಮಕ ಮಾಡಲಾಗಿದೆ.
ಮತದಾರರ ಮಾಹಿತಿ ಪರಿಶೀಲನೆಯನ್ನು ಈ ಅಧಿಕಾರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದರು.ಚಿಕ್ಕಪೇಟೆ, ಮಹದೇವಪುರ, ಶಿವಾಜಿನಗರದಲ್ಲಿ ಮತದಾರರ ಮಾಹಿತಿ ಪರಿಷ್ಕರಣೆ ಆಗುತ್ತಿದೆ. ಜತೆಗೆ ವಾರಕ್ಕೊಮ್ಮೆ ರಾಜಕೀಯ ಮುಖಂಡರ ಸಭೆ ನಡೆಸಲು ತೀರ್ಮಾನವಾಗಿದ್ದು, ಇದರಲ್ಲಿ ಪ್ರತಿ ವಿಧಾನಸಭಾವಾರು ರಾಜಕೀಯ ಪಕ್ಷಗಳು ಒಬ್ಬರೇ ಮುಖಂಡರನ್ನು ಸಭೆಗೆ ಕರೆಯುವಂತೆ ಮನವಿ ಮಾಡಲಾಗಿದೆ.
ಐದು ವಿಧಾನಸಭಾವಾರು ಮತದಾರರ ಮಾಹಿತಿ ವೆಬ್ಸೈಟ್ ಪ್ರಕಟ ಮಾಡಲಾಗುವುದು. ಸಮಸ್ಯೆ ಇದ್ದರೆ ವೆಬ್ಸೈಟ್ನಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ಬೂತ್ಮಟ್ಟದ ಏಜೆಂಟ್ ನೇಮಿಸಿದರೆ, ಮತದಾರರ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ. ಇನ್ನು, ಎಲ್ಲಾ ಬಿಎಲ್ಒಗಳ ಮಾಹಿತಿ ವೆಬ್ಸೈಟ್ನಲ್ಲಿ ಪ್ರಕಟ ಮಾಡಲಾಗುವುದು ಎಂದು ಅವರು ತಿಳಿಸಿದರು.
ಮೂತ್ರಪಿಂಡದಲ್ಲಿ ಕಲ್ಲಿನ (Kidney stone) ಸಮಸ್ಯೆ ಕಡಿಮೆ ಮಾಡುವುದು ಹೇಗೆ.. ?
ಹಾಗೇ, ನಗರದ ಎಲ್ಲಾ ವಲಯಗಳಿಗೂ ಎಡಿಒಗಳನ್ನು ಕೇಂದ್ರ ಚುನಾವಣಾ ಆಯೊಗ ನೇಮಿಸಿದೆ. ಎಲ್ಲಾ ರಾಜಕೀಯ ಪಕ್ಷಗಳು ಬೂತ್ ನಿರೀಕ್ಷಕರನ್ನು ನಿಗದಿಪಡಿಸಿದ ಬಳಿಕ ಮತ್ತೊಮ್ಮೆ ಎಲ್ಲಾ ಮಾಹಿತಿ ಜನರಿಗೆ ನೀಡುತ್ತೇವೆ. ಕೇಂದ್ರ ಚುನಾವಣಾ ಆಯೋಗದಿಂದ ನಮಗೆ ಸೂಚನೆ ಬಂದಿದೆ ಎಂದು ಉಲ್ಲೇಖಿಸಿದರು.
ನಾವು ಎಲ್ಲಾ ರಾಜಕೀಯ ಪಕ್ಷಗಳ ಈ-ಮೇಲ್ ಐಡಿ ಪಡೆದುಕೊಂಡಿದ್ದೇವೆ. ಅವರಿಗೆ ಮತಪಟ್ಟಿ ಪರಿಷ್ಕರಣೆಯ ಎಲ್ಲಾ ಮಾಹಿತಿಯನ್ನು ಪ್ರತಿ ವಾರ ಸಲ್ಲಿಸುತ್ತಿ ದ್ದೇವೆ. ಶಿವಾಜಿನಗರ, ಚಿಕ್ಕಪೇಟೆ, ಮಹದೇವಪುರದಲ್ಲಿ ಶೇ.100ರಷ್ಟು ಮತಪಟ್ಟಿ ಪರಿಷ್ಕರಣೆ ಮಾಡುತ್ತೇವೆ. ಈ ಮೂರು ಕ್ಷೇತ್ರಗಳಲ್ಲಿ ನಾವು ಪ್ರತಿ ಮನೆಗೆ ಹೋಗಿ ವಿಚಾರಿಸಿ ಮತಪಟ್ಟಿ ಪರಿಷ್ಕರಣೆ ಮಾಡುತ್ತೇವೆ ಎಂದು ವಿವರಿಸಿದರು.
#Appointment, KAS, officers, revision, voterlist,