ಉತ್ತರಾಖಾಂಡ್‍ : ಕಂದಕಕ್ಕೆ ಕಾರು ಉರುಳಿ ಬಿದ್ದು 12 ಸಾವು

Social Share

ಡೆಹ್ರಾಡೂನ್,ನ.19- ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಕಾರು ಎತ್ತರದ ಪ್ರದೇಶ ಏರಲಾಗದೆ ಹಿಂಬದಿ ಚಲಿಸಿ ರಸ್ತೆ ಬದಿ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರಾಖಾಂಡ್‍ನ ಚಮೋಲಿ ಜಿಲ್ಲಾಯ ಪಲ್ಲಾ ಗ್ರಾಮದ ಬಳಿ ಸಂಭವಿಸಿದೆ.

ಘಟನೆಯಲ್ಲಿ ಇತರ ಐದು ಮಂದಿ ತೀವ್ರವಾಗಿ ಗಾಯಗೊಂಡಿದ್ದು ಮುಖ್ಯಮಂತ್ರಿ ಧಾಮಿ ಅವರು ಮೃತರ ಕುಟುಂಬ ವರ್ಗದವರಿಗೆ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಜತೆಗೆ ಘಟನೆ ಕುರಿತಂತೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ.

10 ಪ್ರಯಾಣಿಕರನ್ನು ಸಾಗಿಸಬಲ್ಲ ಟಾಟಾ ಸುಮೋ ಕಾರಿನಲ್ಲಿ 17 ಪ್ರಯಾಣಿಕರಿದ್ದರು ಎನ್ನಲಾಗಿದೆ. ಸ್ಥಳಕ್ಕೆ ದೌಡಾಯಿಸಿರುವ ವಿಪತ್ತು ನಿರ್ವಹಣಾ ಪಡೆ ರಕ್ಷಣಾ ಕಾರ್ಯಚರಣೆ ನಡೆಸುತ್ತಿದೆ.

ಶದ್ದಾ ಕೊಲೆ ಮಾದರಿಯಲ್ಲೇ ಬಾಂಗ್ಲಾದಲ್ಲೂ ಪ್ರೇಯಸಿಯ ಭೀಕರ ಹತ್ಯೆ

ಜೋಶಿಮಠದಿಂದ ಕಿಮಾರಾಗೆ ತೆರಳುತ್ತಿದ್ದ ಕಾರು ರಸ್ತೆಯ ಎತ್ತರದ ಭಾಗವನ್ನು ದಾಟಲು ವಿಫಲವಾಗಿ ಹಿಂದಕ್ಕೆ ಚಲಿಸಲು ಪ್ರಾರಂಭಿಸಿತು. ತಕ್ಷಣ ಇಬ್ಬರು ಪ್ರಯಾಣಿಕರು ಕೆಳಗಿಳಿದು ಚಲಿಸುತ್ತಿದ್ದ ಕಾರಿನ ಟೈರ್‍ಗಳಿಗೆ ಕಲ್ಲುಗಳನ್ನಿಟ್ಟು ತಡೆಯಲು ಮುಂದಾದರೂ ಆದರೂ ಕಾರು 500 ಮೀಟರ್ ಆಳದ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ಯಾಂಕ್ ಹಗರಣಗಳಲ್ಲಿ RBI ಅಧಿಕಾರಿಗಳ ಪಾತ್ರ : ಸಿಬಿಐ ತನಿಖೆಗೆ 4 ವಾರ ಕಾಲಾವಕಾಶ

ಮೃತರೆಲ್ಲರೂ 27 ರಿಂದ 70 ವರ್ಷದೊಳಗಿನವರಾಗಿದ್ದು, ಎಲ್ಲರ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

12 killed, vehicle, rolls, down, gorge, Uttarakhand,

Articles You Might Like

Share This Article