ಭೂಪಾಲ್ ಜು.18 – ಇಂದು ಬೆಳಿಗ್ಗೆ ಮಧ್ಯಪ್ರದೇಶದ ಧಾರ್ ಜಿಲ್ಲಾಯಲ್ಲಿ ನರ್ಮದಾ ನದಿಗೆ ಮಹಾರಾಷ್ಟ್ರ ರಸ್ತೆ ಸಾರಿಗೆ ಬಸ್ ಬಿದ್ದು ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ. ಧಾರ್ ಮತ್ತು ಖಾರ್ಗೋನ್ ಗಡಿಯ ಸಮೀಪದಲ್ಲಿರುವ ರಾಷ್ಟ್ರೀಯ ಹೆದ್ದಾರಿ ನಂ.3 (ಆಗ್ರಾ-ಮುಂಬೈ ರಸ್ತೆ) ಸೇತುವೆಯಮೇಲೆ ಬರುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ.
ಬೆಳಗ್ಗೆ ಇಂದೋರ್ ನಗರದಿಂದ ಬೆಳಿಗ್ಗೆ 7.30 ರ ಸುಮಾರಿಗೆ ಹೊರಟ ಬಸ್ ಮಹಾರಾಷ್ಟ್ರದ ಜಲಗಾಂವ್ ಜಿಲ್ಲಾಗೆ ತೆರಳುತ್ತಿತ್ತು ಎಂದು ಎಂಎಸïಆರ್‍ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 12, 2012 ರಂದು ನಾಗ್ಪುರ ಗ್ರಾಮೀಣ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಬಸ್ ಅನ್ನು ನೋಂದಾಯಿಸಲಾಗಿದೆ ಮತ್ತು ವಾಹನವು ರಸ್ತೆಗೆ ಯೋಗ್ಯವಾಗಿದೆ ಎಂದು ಸೂಚಿಸುವ ಅದರ ಪ್ರಮಾಣಪತ್ರವು ಜುಲೈ 27, 2022 ರಂದು ಮುಕ್ತಾಯಗೊಳ್ಳಲಿದೆ ಎಂದು ಹಿರಿಯ ಆರ್‍ಟಿಓ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಮಾರು 16ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಲಾಗಿದೆ ಆಸ್ಪತ್ರೆ ದಾಕಲಾಗಿರುವ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಮೃತರ ಮಹಿತಿ ಪಡೆಯಲಾಗುತ್ತಿದೆ ಮಹಾರಾಷ್ಟ್ರ ಹಾಗು ಮಧ್ಯಪ್ರದೇಶ ಸಿಎಂ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ