ಮೆರವಣಿಗೆ ಹೋಗುತ್ತಿದ್ದ ಜನರ ಮೇಲೆ ಟ್ರಕ್ ಹರಿದು 12 ಮಂದಿ ಸಾವು

Social Share

ಪಾಟ್ನಾ ನ.21-ದೇವರ ಮೆರವಣಿಗೆ ಹೋಗುತ್ತಿದ್ದ ಜನರ ಮೇಲೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಮಕ್ಕಳು -ಮಹಿಳೆಯರು ಸೇರಿದಂತೆ 12 ಜನರು ಸಾವನ್ನಪ್ಪಿರುವ ಘಟನೆ ವೈಶಾಲಿಯಲ್ಲಿ ನಡೆದಿದೆ.

ರಾಜ್ಯ ರಾಜಧಾನಿ ಪಾಟ್ನಾದಿಂದ ಸುಮಾರು 30 ಕಿಮೀ ದೂರದಲ್ಲಿರುವ ವೈಶಾಲಿ ಜಿಲ್ಲೆಯಲ್ಲಿ ರಾತ್ರಿ ಈ ಘಟನೆ ನಡೆದಿದ್ದು,ಸುಮಾರು 40 ಜನರು ಗಾಯಗೊಂಡಿದ್ದಾರೆ ಎಂದು ವೈಶಾಲಿ ಪೊಲೀಸ್ ಅೀಧಿಕ್ಷಕ ಮನೀಶ್‍ ತಿಳಿಸಿದ್ದಾರೆ.

ಆಕ್ರೋಷಗೊಂಡ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ 100ಕ್ಕೂ ಹೆಚ್ಚು ವಾಹನಗಳನ್ನು ದ್ವಂಸಗೊಳಿಸಿದರು ಟೈರ್‍ಗೆ ಬೆಂಕಿ ಹಚ್ಚಿದ ನಿವಾಸಿಗಳು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು.

ಸರಣಿ ಅಪಘಾತ: 38 ಮಂದಿಗೆ ಗಾಯ, 40 ವಾಹನಗಳು ಜಖಂ

ಹೆಚ್ಚುವರಿ ಪಡೆಗಳು ಸ್ಥಳಕ್ಕೆ ಧಾವಿಸಿ ಹಿಂಸಾಚಾರವು ತಡಯಲು ಹರಸಾಹಸಪಟ್ಟರು. ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದು ಮೃತರ ಹತ್ತಿರದ ಕುಟುಂಬಕ್ಕೆ 2 ಲಕ್ಷ ಪರಿಹಾರ ಹಾಗು ಗಾಯಾಳುಗಳಿಗೆ 50 ಸಾವಿರ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಟ್ವೀಟ್ ಮಾಡಿದ್ದಾರೆ.

ಕಳೆಗಟ್ಟಿದ ಕಡಲೆಕಾಯಿ ಪರಿಷೆ, ಹರಿದುಬಂದ ಜನಸಾಗರ

ಪ್ರತಿಭಟನಾಕಾರರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅಥವಾ ಅವರ ಉಪ ತೇಜಸ್ವಿ ಯಾದವ್ ಘಟನಾ ಸ್ಥಳಕ್ಕೆ ಭೇಟಿ ನೀಡಬೇಕೆಂದು ಒತ್ತಾಯಿಸಿದರು.ಪ್ರದೇಶದಲ್ಲಿ ಇನ್ನು ಪರಿಸ್ಥಿತಿ ಬಿಗುವಿನಿಂದ ಕೂಡಿದೆ.

12 Killed, Bihar, Truck, Rams, Religious, Procession,

Articles You Might Like

Share This Article