ನಡುರಸ್ತೆಯಲ್ಲಿ ಪೆಟ್ರೋಲ್ ಟ್ಯಾಂಕರ್ ಸ್ಪೋಟ : 12 ಮಂದಿ ಸಾವು

Social Share

ಕೊಗಿ(ನೈಜೀರಿಯಾ),ನ.12-ನೈಜೀರಿಯಾದ ಉತ್ತರ ಮಧ್ಯ ಕೋಗಿರಾಜ್ಯದ ಪ್ರಮುಖ ರಸ್ತೆಯಲ್ಲಿ ಪೆಟ್ರೋಲ್ ಟ್ಯಾಂಕರ್ ಸ್ಪೋಟಗೊಂಡು ಉಂಟಾದ ಅವಘಡದಲ್ಲಿ 12 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ವೋಪು ಕೌನ್ಸಿಲ್ ಪ್ರದೇಶದ ಪ್ರಮುಖ ರಸ್ತೆಯೊಂದರಲ್ಲಿ ಪೆಟ್ರೋಲ್ ಟ್ಯಾಂಕರ್‍ನ ಬ್ರೇಕ್ ಫೇಲಾಗಿ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಪೆಟ್ರೋಲ್ ಟ್ಯಾಂಕರ್‍ನಲ್ಲಿ ಬೆಂಕಿ ಕಾಣಿಸಿಕೊಂಡು ಸ್ಪೋಟಗೊಂಡಿದೆ.

ಈ ದುರ್ಘಟನೆಯಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ. ಘಟನೆ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ ವಿಲಿಯಂ ಓವಿ ಅಯಾ ಅವರು ಗುರುವಾರ ತಡರಾತ್ರಿ ಪೆಟ್ರೋಲ್ ಟ್ಯಾಂಕರ್‍ನ ವಾಹನದ ಬ್ರೇಕ್ ಫೇಲಾಗಿ ಎದುರಿಗಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಬೆಂಗಳೂರಲ್ಲಿ ಜಿಟಿಜಿಟಿ ಮಳೆ, ಶೀತಗಾಳಿ

ನಂತರ ಸ್ಪೋಟಗೊಂಡಿದೆ. ಪರಿಣಾಮ ಇತರ ವಾಹನಗಳಿಗೂ ಬೆಂಕಿ ತಗುಲಿದೆ. 12 ಮಂದಿ ಸಾವನ್ನಪ್ಪಿ, 6ಕ್ಕೂ ಹೆಚ್ಚು ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ಹೇಳಿದ್ದಾರೆ. ಕಳೆದ ಸೆಪ್ಟೆಂಬರ್‍ನಲ್ಲಿ ಇದೇ ರೀತಿಯ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದರು.

ಕಾರ್ಯಕ್ರಮಕ್ಕೆ ದೇವೇಗೌಡರಿಗಿಲ್ಲ ಆಹ್ವಾನ, ಜೆಡಿಎಸ್ ಆಕ್ರೋಶ

Articles You Might Like

Share This Article