ಅಮೆರಿಕದ ಸೂಪರ್ ಮಾರ್ಕೆಟ್‍ನಲ್ಲಿ ಶೂಟೌಟ್, 13 ಮಂದಿಯ ದಾರುಣ ಹತ್ಯೆ

ಬಫಲೋ (ಅಮೆರಿಕ) ಮೇ 15 – ಮಿಲಿಟರಿ ಯೋಧನ ರೀತಿ ಉಡುಪು ಧರಿಸಿ ಹೆಲ್ಮೆಟ್ ಕ್ಯಾಮೆರಾದೊಂದಿಗೆ ಸೂಪರ್‍ ಮಾರ್ಕೆಟ್‍ಗೆ ಬಂದ ಯುವಕನೊಬ್ಬ ತನ್ನ ರೈಫಲ್‍ನಿಂದ ಗುಂಡು ಹಾರಿಸಿ 13 ಜನರನ್ನು ಕೊಂದಿರುವ ಘಟನೆ ಬಫಲೋ ನಗರದಲ್ಲಿ ನಡೆದಿದೆ. ಘಟನೆಯಲ್ಲಿ ಇನ್ನು ಮೂವರು ಗಾಯಗೊಂಡಿದ್ದಾರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದು, ಇದು ಜನಾಂಗೀಯ ಹಿಂಸಾಚಾರದ ಘಟನೆ ಎಂದು ಹೇಳಲಾಗಿದೆ.

ಟಾಪ್ಸ ಫ್ರೆಂಡ್ಲಿ ಮಾರ್ಕೆಟ್‍ನಲ್ಲಿ ಹೆಚ್ಚಾಗಿ ಕಪ್ಪು ವಣೀಯ ವ್ಯಾಪಾರಿಗಳು ಮತ್ತು ಕೆಲಸಗಾರರಿದ್ದಾರೆ ಎಂದು ಅರಿತು ಗುಂಡಿನ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. ಬಂದೂಕುಧಾರಿ ದೇಹದ ರಕ್ಷಾಕವಚ ಮತ್ತು ಮಿಲಿಟರಿ ಶೈಲಿಯ ಉಡುಪುಗಳನ್ನು ಧರಿಸಿದ್ದ, ಗುಂಡಿನ ದಾಳಿಯ ದೃಶ್ಯವನ್ನು ಕನಿಷ್ಠ ಎರಡು ನಿಮಿಷಗಳ ಕಾಲ ಶೂಟಿಂಗ್ ನೇರ ಪ್ರಸಾರ ಮಾಡಿದ್ದಾನೆ . ಪೊಲೀಸರಿಗೆ ಶರಣಾಗುವ ಮೊದಲು ಆತ 11 ಕಪ್ಪು ಮತ್ತು ಇಬ್ಬರು ಬಿಳಿಯರನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ, 18 ವರ್ಷದ ದಾಳಿಕೋರ ನ್ಯೂಯಾರ್ಕ್‍ನ ಕಾಂಕ್ಲಿನ್ ಪೇಟನ್ ಜೆಂಡ್ರಾನ್‍ನನ್ನು ನ್ಯಾಯಾೀಶರ ಮುಂದೆ ಹಾಜರಿಪಡಿಸಿ ವಿಚಾರಣೆಗೆ ಒಳಪಡಿಸಲಾಯಿತು ಎಂದು ತಿಳಿಸಿದ್ದಾರೆ ಬಫಲೋಗೆ ಏಕೆ ಬಂದ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ. ಅಂಗಡಿಯ ಹೊರಗೆ ಒಳಗೆ ಅಮಾಯಕರನ್ನು ಕೊಂದಿದ್ದಾನೆ ಎಂದು ಬಫಲೋಪೊಲೀಸ್ ಕಮಿಷನರ್ ಜೋಸೆಫ್ ಗ್ರಾಮಗ್ಲಿಯಾ ತಿಳಿಸಿದ್ದಾರೆ.

ಅಂಗಡಿಯೊಳಗೆ, ಭದ್ರತಾ ಸಿಬ್ಬಂದಿಗೂ ಅನೇಕ ಗುಂಡುಗಳನ್ನು ಹಾರಿಸಿದ ಆದರೆ ಬುಲೆಟ್ ಪ್ರೂಫ್ ವೆಸ್ಟೆ ಕಾಕಿಕೊಂಡಿದ್ದರಿಂದ ಜೀವ ಉಳಿದಿದೆ ಇವರು ನಿವೃತ ಪೊಲಿಸ್ ಅಧಿಕಾರಿ ಎಂದು ತಿಳಿದುಬಂದಿದೆ.