14 ಕೋಟಿ ರೂ.ಪರಿಹಾರ ಕೇಳಿದ ನ್ಯಾ.ಕರ್ಣನ್ ಮನೆಗೆ ಪೊಲೀಸ್ ದಂಡು

Karnana

ನವದೆಹಲಿ, ಮಾ.17– ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆದೇಶ ಧಿಕ್ಕರಿಸಿದ್ದಕ್ಕಾಗಿ ಬಂಧನ ವಾರೆಂಟ್ ಎದುರಿಸುತ್ತಿರುವ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಸ್.ಕರ್ಣನ್, ತಮಗೆ 14 ಕೋಟಿ ರೂ.ಪರಿಹಾರ ನೀಡಬೇಕೆಂದು ಸ್ವಯಂ ಆದೇಶ ಹೊರಡಿಸಿ ಸುದ್ದಿಯಲ್ಲಿದ್ದಾರೆ. ಸುಪ್ರೀಂಕೋರ್ಟ್ ಈಗಾಗಲೇ ಕರ್ಣನ್ ಅವರ ಎಲ್ಲ ನ್ಯಾಯಾಧಿಕಾರವನ್ನು ಕಿತ್ತುಕೊಂಡಿದ್ದರೂ ಸ್ವತಃ ಅವರೇ ತಮ್ಮ ಪರ ಆದೇಶ ಹೊರಡಿಸಿ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ.

ಭಾರತದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ಸುಪ್ರೀಂಕೋರ್ಟ್‍ನ ಆರು ಹಿರಿಯ ನ್ಯಾಯಾಧೀಶರು ತಮಗೆ 14 ಕೋಟಿ ರೂ. ಪರಿಹಾರ ನೀಡಬೇಕೆಂದು ಅವರು ಸ್ವಯಂ ಆದೇಶದಲ್ಲಿ ತಿಳಿಸಿದ್ದಾರೆ. ಈ ಮಧ್ಯೆ, ಸುಪ್ರೀಂಕೋರ್ಟ್ ಆದೇಶದಂತೆ ಪಶ್ಚಿಮ ಬಂಗಾಳ ಪೊಲೀಸ್ ಮಹಾನಿರ್ದೇಶಕರು ಮತ್ತು ಕೋಲ್ಕತ್ತಾ ಪೊಲೀಸ್ ಆಯುಕ್ತರು ಇಂದು ಕರ್ಣನ್ ನಿವಾಸಕ್ಕೆ ತೆರಳಿ, ನ್ಯಾಯಾಲಯ ನಿಂದನೆ ಪ್ರಕರಣದಲ್ಲಿ ಜಾಮೀನು ಸಹಿತ ವಾರೆಂಟ್ ನೀಡಿದ್ದಾರೆ.
ಬಂಧನ ವಾರೆಂಟ್ ಹೊರಡಿಸಲು ಸುಮಾರು 100ಕ್ಕೂ ಹೆಚ್ಚು ಪೊಲೀಸರು ಕರ್ಣನ್ ಅವರ ಮನೆ ಮುಂದೆ ಜಮಾಯಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin