ಪ್ರಶಾಂತ್ ಮಾಡಾಳ್ ಸೇರಿ ನಾಲ್ವರಿಗೆ 14 ದಿನ ನ್ಯಾಯಾಂಗ ಬಂಧನ

Social Share

ಬೆಂಗಳೂರು,ಮಾ.3- ಲಂಚ ಸ್ವೀಕಾರದ ಮೇಲೆ ಲೋಕಾಯುಕ್ತ ಪೊಲೀಸರು ಬಂಧಿಸಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ ಹಾಗೂ ಇತರ ನಾಲ್ವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇಂದು ಬೆಳಿಗ್ಗೆ ಲೋಕಾಯುಕ್ತ ಪೊಲೀಸರು ಪ್ರಶಾಂತ್ ಅವರ ನಿವಾಸ, ಬನಶಂಕರಿಯಲ್ಲಿರುವ ಕೆಎಸ್‍ಡಿಎಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ನಿವಾಸ ಸೇರಿದಂತೆ ನಗರದಲ್ಲಿ ಮೂರು ಕಡೆ ಹಾಗೂ ಚನ್ನಗಿರಿಯಲ್ಲಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಸೇರಿದ ಎರಡು ಮನೆಗಳ ಮೇಲೆ ದಾಳಿ ನಡೆಸಿದ್ದರು.

ಶಾಸಕ ಮಾಡಾಳ್ ವಿರೂಪಾಕ್ಷಪ್ಪರ ಪುತ್ರನ ಮನೆಯಲ್ಲಿ 6 ಕೋಟಿ ಹಣ ಪತ್ತೆ

ದಾಳಿ ಸಂದರ್ಭದಲ್ಲಿ ಪ್ರಶಾಂತ್ ಅವರ ನಿವಾಸದಲ್ಲಿ 6 ಕೋಟಿ ರೂ. ನಗದು ಪತ್ತೆಯಾಗಿತ್ತು. ಈ ಘಟನೆಯ ನಂತರ ಪ್ರಶಾಂತ್, ಆತನ ಅಕೌಟೆಂಟ್ ಹಾಗೂ ಲಂಚ ನೀಡಲು ಪ್ರಶಾಂತ್ ಕಚೇರಿಗೆ ಆಗಮಿಸಿದ್ದ ಮೂವರನ್ನು ಬಂಧಿಸಲಾಗಿತ್ತು.

ಕಾಂಗ್ರೆಸ್, ಎಡಪಕ್ಷಗಳ ಮೈತ್ರಿ ಸಹವಾಸ ಸಾಕು ; ದೀದಿ

ಬಂಧಿತ ಐವರು ಆರೋಪಿಗಳನ್ನು ಇಂದು ಬೆಳಿಗ್ಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾೀಧಿಶರ ಮುಂದೆ ಹಾಜರು ಪಡಿಸಲಾಯಿತು. ಈ ಸಂದರ್ಭದಲ್ಲಿ ನ್ಯಾಯಾೀಧಿಶರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

14 days, judicial, custody, Lokayukta Court,

Articles You Might Like

Share This Article