ಜೋಹಾನ್ಸ್‍ಬರ್ಗ್,ಜು.10-ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್‍ನ ಸೊಯಿಟೊ ಟೌನ್‍ಶಿಪ್‍ನ ಬಾರ್‍ನಲ್ಲಿ ನಡೆದಿರುವ ಸಾಮೂಹಿಕ ಹತ್ಯಾಕಾಂಡದಲ್ಲಿ 14 ಮಂದಿ ಮೃತಪಟ್ಟಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶನಿವಾರ ಮಧ್ಯರಾತ್ರಿ 12.30ರ ಸುಮಾರಿನಲ್ಲಿ ಈ ಹತ್ಯಾಕಾಂಡ ನಡೆದಿದ್ದು ಪೆÇಲೀಸರ ಪ್ರಾಥಮಿಕ ತನಿಖೆ ಪ್ರಕಾರ ಮಿನಿಬಸ್‍ನಲ್ಲಿ ಬಂದಿಳಿದ ಪುರುಷರ ಗುಂಪು ಅಕ ಕ್ಯಾಲಿಬರ್‍ನ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದೆ.
ಇದರಿಂದ ಸ್ಥಳದಲ್ಲೇ 12 ಮಂದಿ ಮೃತಪಟ್ಟಿದ್ದು, ಆಸ್ಪತ್ರೆಯಲ್ಲಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ.
ಪೊಲೀಸರು ಭಾನುವಾರ ಬೆಳಗ್ಗೆ ಶವಗಳನ್ನು ಹೊರತೆಗೆದಿದ್ದಾರೆ. ಗಾಯಾಳುಗಳನ್ನು ಚೆರ್ರಿಸ್‍ಹನಿ ಬರ್ಗಾವಂತ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಂಡು ಹಾರಿದ ಬಳಿಕ ಉಳಿಯುವ ಕಾಟ್ರೇಜ್‍ಗಳು ಪತ್ತೆಯಾಗಿವೆ. ಒಂದು ಗುಂಪು ಈ ಹತ್ಯಾಕಾಂಡವನ್ನು ನಡೆಸಿರುವ ಅನುಮಾನವಿದೆ ಎಂದು ಗಸ್ಟೆಂಗ್ ಪ್ರಾಂತ್ಯದ ಪೊಲೀಸ್ ಆಯುಕ್ತ ಲೆಫ್ಟಿನೆಂಟ್ ಜನರಲ್ ಎಲಿಯಾಸ್ ಮಾವೇಲಾ ತಿಳಿಸಿದ್ದಾರೆ.
ಹೆಚ್ಚು ಸಾಮಥ್ರ್ಯದ ಬಂದೂಕನ್ನು ದಾಳಿಗಾಗಿ ಬಳಸಿರುವುದು ಕಂಡುಬಂದಿದೆ. ಹೋಟೆಲ್‍ನಲ್ಲಿದ್ದ ಪ್ರತಿಯೊಬ್ಬರು ಜೀವ ಉಳಿಸಿಕೊಳ್ಳಲು ಹೋರಾಟ ನಡೆಸಿದ್ದಾರೆ. ಆದರೆ ದಾಳಿಕೋರರನು ನಿರ್ಧಯವಾಗಿ ವರ್ತಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದು ಪರಾವನಗಿ ಪಡೆದ ಬಾರ್ ಮತ್ತು ಹೋಟೆಲ್ ಆಗಿದ್ದು, ಒಂದಷ್ಟು ಜನ ತಮ್ಮ ಸಂಭ್ರಮಾಚರಣೆಗಾಗಿ ಇಲ್ಲಿ ಆಗಮಿಸಿದ್ದರು. ಹೋಟೆಲ್‍ನ ಕಾರ್ಯ ನಿರ್ವಹಣೆ ಕೂಡ ನಿಯಮದ ಚೌಕಟ್ಟಿನಲ್ಲಿದೆ ಎಂದು ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.
ಏಕಾಏಕಿ ಗುಂಡಿನ ಶಬ್ದ ಕೇಳಿಬಂದಿದೆ. ಜನ ಹೋಟೆಲ್‍ನಿಂದ ಹೊರಗೆ ಓಡಿಹೋಗಲು ಯತ್ನಿಸುತ್ತಿರುವುದು ಕಂಡುಬಂದಿದೆ. ಈ ಹತ್ಯಾಕಾಂಡದ ಸಂಪೂರ್ಣ ವಿವರ ಮತ್ತು ಹಿಂದಿನ ಉದ್ದೇಶ ಸದ್ಯಕ್ಕೆ ತಿಳಿದುಬಂದಿಲ್ಲ. ದಾಳಿಕೋರರು ಈ ಜನರನ್ನು ಏಕೆ ಗುರಿಯಾಗಿಸಿಕೊಂಡಿದ್ದರು ಎಂಬ ಬಗ್ಗೆ ಮಾಹಿತಿಯೂ ಸದ್ಯಕ್ಕೆ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.