ಕಾರಾಗೃಹದ ಮೇಲೆ ಬಂದೂಕುಧಾರಿಗಳಿಂದ ದಾಳಿ, 14 ಮಂದಿ ಸಾವು, 24 ಕೈದಿಗಳು ಪರಾರಿ

Social Share

ಮೆಕ್ಸಿಕೊ,ಜ.2- ಇಲ್ಲಿನ ಕಾರಾಗೃಹದ ಮೇಲೆ ಬಂದೂಕುಧಾರಿಗಳಿಂದ ಭೀಕರ ದಾಳಿ ನಡೆದ ಪರಿಣಾಮ 10 ಭದ್ರತಾ ಸಿಬ್ಬಂದಿ ಮತ್ತು ನಾಲ್ವರು ಕೈದಿಗಳು ದುರ್ಮರಣಕ್ಕೀಡಾದ ಘಟನೆ ನಡೆದಿದೆ.

ಟಕ್ಸಾಸ್‍ನ ಎಲ್‍ಪಾಸೋ ಪ್ರಾಂತ್ಯದ ಗಡಿಯಾಚೆಗಿನ ಸಿಯುಡಾಡ್, ಜುರೇಜ್ ಎಂಬಲಿರುವ ಮೆಕ್ಸಿಕೋದ ಕಾರಾಗೃಹದ ಮೇಲೆ ಬಂದೂಕುಧಾರಿಗಳು ಏಕಾಏಕಿ ದಾಳಿ ಮಾಡಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಹಲವು ಶಸ್ತ್ರಸಜ್ಜಿತ ವಾಹನಗಳೊಂದಿಗೆ ಬಂದ ಬಂದೂಕುಧಾರಿಗಳು ಕಾವಲುಗಾರರ ಮೇಲೆ ಗುಂಡಿನ ಮಳೆಗೆರೆದರು ಎಂದು ಚಿವಾಹೊ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.

ಈ ಘಟನೆಯಲ್ಲಿ 13 ಜನ ಗಾಯಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ 24 ಕೈದಿಗಳು ಪರಾರಿಯಾಗಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿ ಮೆಕ್ಸಿಕನ್ ಪೆಪೊಲೀಸರು ಮತ್ತು ಸೈನಿಕರು ಜೈಲನ್ನು ನಿಯಂತ್ರಣಕ್ಕೆ ಪಡೆದು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಿಷಭ್‍ಪಂತ್ ಜೀವ ರಕ್ಷಿಸಿದ ಚಾಲಕ ಸುಶೀಲ್‍ಮಾನ್‍ಗೆ ಸನ್ಮಾನ

ಕಳೆದ ಆಗಸ್ಟ್‍ನಲ್ಲಿ ಜೈಲಿನೊಳಗೆ ಗಲಭೆ ನಡೆದು ಇಬ್ಬರು ಕೈದಿಗಳನ್ನು ಗುಂಪೊಂದು ಕೊಂದು ಹಾಕಿತ್ತು. ನಂತರ ಜುರೇಜ್ ಬೀದಿಗಳಿಗೆ ಹಿಂಸಾಚಾರ ಹಬ್ಬಿತ್ತು. ಹತ್ಯೆ ಮಾಡಿದ್ದ ಗುಂಪು ಪಟ್ಟಣದಲ್ಲಿ ಗುಂಡಿನ ದಾಳಿ ನಡೆಸಿದ ಪರಿಣಾಮ 11 ಜನ ಮೃತಪಟ್ಟಿದ್ದರು.

ನೆಲಮಂಗಲ- ದೇವಿಹಳ್ಳಿ ಹೆದ್ದಾರಿ ಪೂರ್ಣ

ಮೆಕ್ಸಿಕನ್ ಜೈಲುಗಳಲ್ಲಿ ಇಂತಹ ಹಿಂಸಾಚಾರ ಪ್ರಕರಣಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಕೈದಿಗಳ ಗುಂಪುಗಳ ನಡುವೆ ಘರ್ಷಣೆಗಳು ಆಗುತ್ತಲೇ ಇರುತ್ತವೆ. ನಿನ್ನೆ ನಡೆದ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿವಲ್ಲಿ ಯಶಸ್ವಿಯಾಗಿರುವ ಪೆಪೊಲೀಸರು ಇಬ್ಬರು ಬಂಧೂಕುದಾರಿಗಳನ್ನು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

14 killed, attack, Mexican, prison, Ciudad Juarez,

Articles You Might Like

Share This Article