ಭಾರತದಲ್ಲಿ ಕೊರೋನಾ ಬ್ಲಾಸ್ಟ್, 24 ಗಂಟೆಯಲ್ಲಿ 1,41,986 ಕೇಸ್..!

Social Share

ನವದೆಹಲಿ, ಜ.8- ಭಾರತದಲ್ಲಿ ಒಂದೇ ದಿನದಲ್ಲಿ 1,41,986 ಜನರಲ್ಲಿ ಹೊಸ ಕರೋನವೈರಸ್ ಪ್ರಕರಣಗಳು ಪತ್ತೆಯಾಗಿದೆ.285 ಮಂದಿ ಸಾವನ್ನಪ್ಪಿದ್ದಾರೆ.ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 3,53,68,372 ಕ್ಕೆ ಏರಿದೆ,ನೆನ್ನೆಗೆ ಹೋಲಿಸಿದರೆ ಶೇ 21 ರಷ್ಟು ಹೆಚ್ಚಾಗಿದೆಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಮಾಹಿತಿಯ ಪ್ರಕಾರ, ಓಮಿಕ್ರಾನ್ ರೂಪಾಂತರದ 3,071 ಪ್ರಕರಣಗಳಲ್ಲಿ 1,203 ಜನ ಚೇತರಿಸಿಕೊಂಡಿದ್ದಾರೆ.ಮಹಾರಾಷ್ಟ್ರದಲ್ಲಿ ಗರಿಷ್ಠ 876 ಒಮಿಕ್ರಾನ್ ಪ್ರಕರಣಗಳು ದಾಖಲಾಗಿದ್ದು, ದೆಹಲಿಯಲ್ಲಿ 513, ಕರ್ನಾಟಕ 333, ರಾಜಸ್ಥಾನ 291, ಕೇರಳ 284 ಮತ್ತು ಗುಜರಾತ್ 204 ಪ್ರಕರಣಗಳು ಕಂಡುಬಂದಿದೆ.
ಒಂದು ದಿನದಲ್ಲಿ ಒಟ್ಟು 1,41,986 ಹೊಸ ಕರೋನವೈರಸ್ ಸೋಂಕುಗಳು ವರದಿಯಾಗಿವೆ, ಇದು ಸುಮಾರು 222 ದಿನಗಳಲ್ಲಿ ಅತಿ ಹೆಚ್ಚುಎಂದು ವರದಿ ಹೇಳಿದೆ. 24 ಗಂಟೆಗಳ ಅವಯಲ್ಲಿ ಸಕ್ರಿಯ ಪ್ರಕರಣ 1,00,806 ಹೆಚ್ಚಳವಾಗಿದೆ

Articles You Might Like

Share This Article