ಇಕ್ವಿಡಾರ್‌ನಲ್ಲಿ ಪ್ರಬಲ ಭೂಕಂಪ, 15 ಮಂದಿ ಸಾವು

Social Share

ಕ್ವಿಟೊ,ಮಾ.19- ದಕ್ಷಿಣ ಅಮೆರಿಕದ ಇಕ್ವಿಡಾರ್‍ನಲ್ಲಿ ಪ್ರಬಲ ಭೂಕಂಪ ಸಂಭವಿಸಿ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ 126ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಇಕ್ವಿಡಾರ್ ಮತ್ತು ಉತ್ತರ ಪೆರುವಿನ ಪ್ರದೇಶದಲ್ಲಿ ರಿಕ್ಟರ್ ಮಾಪನದಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪನದಿಂದ ಕಟ್ಟಡಗಳು ಧರೆಗುರುಳಿವೆ. ಜನರು ಮನೆಬಿಟ್ಟು ಬೀದಿಗೆ ಬಂದಿದ್ದಾರೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರೆದಿದೆ.

ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸತತ ಕಾರ್ಯಾಚರಣೆ ನಡೆಸಿ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದೇಶದ ಕರಾವಳಿ ಗುವಾಯಸ್ ಪ್ರದೇಶದಲ್ಲಿ ಇಷ್ಟೇ ಪ್ರಮಾಣದ ಭೂಕಂಪನ ಸಂಭವಿಸಿದ್ದು, ಅಲ್ಲೂ ಕೂಡ ಭಾರೀ ಅನಾಹುತಗಳು ಆಗಿವೆ. ಈಕ್ವಿಡಾರ್‍ನ 2ನೇ ದೊಡ್ಡ ನಗರವಾದ ಗುವಾಕ್ವಿಲ್‍ನ ದಕ್ಷಿಣ ಭಾಗದ ಸುಮಾರು 50 ಮೈಲಿಗಳ ದೂರದಲ್ಲಿ ಕಂಪನದ ಕೇಂದ್ರಬಿಂದು ಇದೆ ಎಂದು ಭೂ ವೈಜ್ಞಾನಿಕ ಸಮೀಕ್ಷಾ ವರದಿ ತಿಳಿಸಿದೆ.

ಅಮಿತ್ ಶಾ ಭೇಟಿ ಮಾಡಿದ ರಮೇಶ ಜಾರಕಿಹೊಳಿ

ಸಾಕಷ್ಟು ಕಟ್ಟಡಗಳು ಧರೆಗುರುಳಿ ಸಾವುನೋವುಗಳು ಸಂಭವಿಸಿದ್ದು, ಈ ಸಂದರ್ಭದಲ್ಲಿ ಜನರು ಶಾಂತಿ ಕಾಪಾಡುವಂತೆ ಈಕ್ವಿಡಾರ್ ಅಧ್ಯಕ್ಷ ಗಿಲ್ಲೆರ್ಮೊ ಅವರು ಮನವಿ ಮಾಡಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಹಾನಿಗೊಳಗಾದವರಿಗೆ ಎಲ್ಲ ಸೌಲಭ್ಯಗಳನ್ನು ಕೂಡ ನೀಡಲಾಗುತ್ತದೆ. ಜನ ಅನಗತ್ಯ ಭೀತಿಗೆ ಒಳಗಾಗುವುದು ಬೇಡ ಎಂದು ತಿಳಿಸಿದ್ದಾರೆ.

ಕೋಲ್ಕತ್ತಾದಲ್ಲಿ ಶಾಸಕನ ಮೇಲೆ ಹಲ್ಲೆ

ಈಕ್ವಿಡಾರ್‍ನಲ್ಲಿ ಸದ್ಯ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಸಾವುನೋವುಗಳ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಉತ್ತರ ಪೆರುವಿನಲ್ಲಿ ಭೂಕಂಪ ಸಂಭವಿಸಿದ್ದರೂ ಅಲ್ಲಿ ಹೆಚ್ಚು ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಈಕ್ವಿಡಾರ್ ನಲ್ಲಿ ಆಗಾಗ್ಗೆ ಭೂಕಂಪನಗಳು ಸಂಭವಿಸುತ್ತಲೇ ಇರುತ್ತದೆ. 2016ರಲ್ಲಿ ಸಂಭವಿಸಿದ ಭೂಕಂಪನದಲ್ಲಿ 600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಜಗತ್ತಿನ ಹಲವೆಡೆ ಭೂಕಂಪನಗಳು ಸಂಭವಿಸುತ್ತಿದ್ದು, ಟರ್ಕಿಯಲ್ಲಿ ಸಂಭವಿಸಿದ ಭಾರೀ ಪ್ರಮಾಣದ ಭೂಕಂಪನದಿಂದ ಹಲವು ನಗರಗಳೇ ನಾಶವಾಗಿ 40 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

#earthquake, #kills15, #Ecuador, #Peru,

Articles You Might Like

Share This Article