ವಿಶ್ವ ಆರೋಗ್ಯಕ್ಕಾಗಿ 151 ಗಂಟೆಗಳ ಧಾರ್ಮಿಕ ಪೂಜೆ

Social Share

ಬೆಂಗಳೂರು,ಮಾ.4- ವಿಶ್ವ ಆರೋಗ್ಯಕ್ಕಾಗಿ ಶತ ವೈಭವ ಕಾರ್ಯಕ್ರಮದ ಮೂಲಕ 151 ಗಂಟೆಗಳ ಕಾಲ ಧಾರ್ಮಿಕ ಪೂಜಾ ಕಾರ್ಯಗಳನ್ನು ಮಾಡಲಾಗುತ್ತದೆ ಎಂದು ರಂಜಿನಿ ಕಲಾಕ್ಷೇತ್ರ ಸಂಸ್ಥೆಯ ಕಾರ್ಯದರ್ಶಿ ಡಾ.ಸುಪರ್ಣ ರವಿ ಶಂಕರ್ ತಿಳಿಸಿದರು.
ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಂಜನಿ ಕಲಾಕೇಂದ್ರ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಯುವಜನ ಆರೋಗ್ಯ ಸರ್ವರಿಗೂ ಶಿಕ್ಷಣ ಮುಂತಾದ ಯೋಜನೆಗಳ ಅಡಿಯಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಅಷ್ಟೇ ಅಲ್ಲದೆ ಶತ ವೈಭವ, ಸಹಸ್ತ್ರ ವೀಣಾ ಜೇಂಕಾರ ಮತ್ತು ಆರ್ಟ್ ಫಾರ್ ರೋಮ್ಯಾಂಟಿಕ್ ಮುಂತಾದ ಕಾರ್ಯಕ್ರಮಗಳನ್ನು ಮಾಡಿ ವಿಶ್ವದಾಖಲೆ ಮನ್ನಣೆ ಪಡೆದಿದೆ.
ಸದ್ಯ ವಿಶ್ವ ಕಲ್ಯಾಣಾರ್ಥವಾಗಿ ಮಾರ್ಚ್ 27 ರಿಂದ ಏಪ್ರಿಲ್ 2ರವರೆಗೆ ಶತ ವೈಭವ ಎಂಬ ಸಂಸ್ಕøತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಂಗೀತ, ಜಾನಪದ ಕಲೆ, ಚಿತ್ರಕಲೆ ನಾಟಕಗಳು ಸೇರಿದಂತೆ ಅನೇಕ ಕಲಾಪ್ರಕಾರಗಳ ಪ್ರದರ್ಶನವಿರುತ್ತವೆ. ಕಾರ್ಯಕ್ರಮಕ್ಕೆ ಹೊರ ರಾಜ್ಯಗಳಿಂದ ಕಲಾವಿದರು ಬಂದು ಭಾಗವಹಿಸಲಿದ್ದಾರೆ ಎಂದರು.
ಇದರ ಜೊತೆಯಲ್ಲಿ ವಿಶ್ವ ಆರೋಗ್ಯದ ದೃಷ್ಟಿಯಿಂದ ಯಜ್ಞ, ಹೋಮಾದಿಗಳಂತಹ ಕಾರ್ಯಕ್ರಮಗಳು ಕೂಡ 151 ಗಂಟೆಗಳ ಕಾಲ ಸತತವಾಗಿ ನಡೆಯಲಿವೆ ಎಂದು ಶತ ವೈಭವ ಕಾರ್ಯಕ್ರಮದ ಬಗ್ಗೆ ವಿವರಿಸಿದರು.

Articles You Might Like

Share This Article