ನವದೆಹಲಿ, ಜ.9- ಭಾರತದಲ್ಲಿ ಹೊಸದಾಗಿ 1,59,632 ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಕಳೆದ 224 ದಿನಗಳಲ್ಲೇ ಅತ್ಯಕ ದೈನಿಕ ಪ್ರಮಾಣ ಇದಾಗಿದೆ.ಸಕ್ರಿಯ ಪ್ರಕರಣಗಳ ಸಂಖ್ಯೆ 5,90,611ಕ್ಕೇರಿದೆ.
ಇದು ಕಳೆದ 197 ದಿನಗಳಲ್ಲಿ ಅತಿಹೆಚ್ಚಿನದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ 8 ಗಂಟೆಗೆ ತಾಜಾ ಮಾಹಿತಿ ನೀಡಿದೆ.ಕಳೆದ 24 ಗಂಟೆಗಳಲ್ಲಿ 329 ಮಂದಿ ಮೃತಪಟ್ಟಿದ್ದು, ಒಟ್ಟಾರೆ ಕೋವಿಡ್ ಮರಣ ಪ್ರಮಾಣ 4,83,790ಕ್ಕೆ ತಲುಪಿದೆ.
ಕಳೆದ ವರ್ಷ ಮೇ 29ರಂದು 165,553 ಸೋಂಕಿನ ಪ್ರಕರಣಗಳು ವರದಿಯಾಗಿದ್ದವು.ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 552 ಹೊಸ ಓಮಿಕ್ರಾನ್ ಪ್ರಕರಣಗಳು ಸಹ ದಾಖಲಾಗಿದ್ದು, ಒಟ್ಟಾರೆ ಓಮಿಕ್ರಾನ್ ಸೋಂಕಿತರ ಸಂಖ್ಯೆ 3623ಕ್ಕೆ ಏರಿಕೆಯಾಗಿದೆ. 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸೋಂಕು ಪತ್ತೆಯಾಗಿದೆ.
ಒಟ್ಟಾರೆ ಓಮಿಕ್ರಾನ್ ಸೋಂಕಿತರ ಪೈಕಿ 1490 ಜನರು ವಲಸೆ ಹೋಗಿದ್ದಾರೆ, ಇಲ್ಲವೆ ಗುಣಮುಖರಾಗಿದ್ದಾರೆ.ಮಹಾರಾಷ್ಟ್ರದಲ್ಲಿ ಗರಿಷ್ಠ ಸಂಖ್ಯೆಯ (1009) ಪ್ರಕರಣಗಳು ದಾಖಲಾಗಿದ್ದರೆ ದೆಹಲಿ (513), ಕರ್ನಾಟಕ (441), ರಾಜಸ್ಥಾನ (373), ಕೇರಳ (333) ಮತ್ತು ಗುಜರಾತ್ (204) ಅನಂತರದ ಸ್ಥಾನಗಳಲ್ಲಿವೆ.
