16 ಗ್ರಾಪಂ, ಉಪಚುನಾವಣೆಯಲ್ಲಿ 11 ಸ್ಥಾನ ಬಿಜೆಪಿ ತೆಕ್ಕೆಗೆ

Spread the love

kollegala

ಕೊಳ್ಳೇಗಾಲ, ಸೆ.1- ಇತ್ತೀಚೆಗೆ ನಡೆದ ಒಟ್ಟು 16 ಗ್ರಾಪಂ ಸ್ಥಾನಗಳ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ನಡೆದು ಒಟ್ಟಾರೆ 16 ಸ್ಥಾನಗಳ ಪೈಕಿ ಬಿಜೆಪಿ 11 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ಆಡಳಿತ ಪಕ್ಷವಾದ ಕಾಂಗ್ರೆಸ್ ಕೇವಲ 5 ಸ್ಥಾನಗಳನ್ನು ಪಡೆದಿದ್ದು ಭಾರಿ ಮುಖಭಂಗವಾಗಿದೆ.ಒಟ್ಟು ಸ್ಥಾನಗಳ ಪೈಕಿ 11 ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವುದು ಮುಂದಿನ ವಿಧಾನಸಭಾ ಚುನಾವಣೆಗೆ ಜಯದ ದಿಕ್ಸೂಚಿಯಾಗಿದೆ ಎಂದು ಸಾರ್ವಜನಿಕರು ಅಲ್ಲಲ್ಲಿ ಚರ್ಚೆ ನಡಸಿದ್ದು ಕಂಡು ಬಂದಿತು.ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಕವಿತಾ ರಾಜಾರಾಂ ಉಸ್ತುವಾರಿಯಲ್ಲಿ ನಡೆದ ಮತ ಎಣಿಕೆ ಕಾರ್ಯದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಮೇಶ್.ಆರ್ 492 ಮತಗಳನ್ನು ಪಡೆದು ಜಯಗಳಿಸಿದ್ದಾರೆ, ತಮ್ಮ ಸಮೀಪ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಿ.ಗೊವಿಂದ 422 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಶಾಗ್ಯ ಗ್ರಾಮದ 2 ನೇ ವಾರ್ಡ್‍ಗೆ ಮಾರಪ್ಪ 392 ಮತಪಡೆಯುವ ಮೂಲಕ ತೆರವಾಗಿದ್ದ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ಕುರುಟ್ಟಿ ಹೊಸೂರು ಗ್ರಾಪಂ ಮತದಾರರು ಈ ಚುನಾವಣೆಯಲ್ಲಿ ಗ್ರಾಪಂ ಒಟ್ಟು 14 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪಡೆದಿದ್ದು ಉಳಿದ 5 ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದು ಗ್ರಾಪಂನ ಬಹುಮತವನ್ನು ಬಿಜೆಪಿ ಪಡೆದುಕೊಂಡಿದೆ.  ಕುರುಟ್ಟಿ ಹೊಸೂರು ಒಂದನೇ ಚುನಾವಣೆ ಕ್ಷೇತ್ರದಿಂದ ಅನುಸೂಚಿತ ಜಾತಿ ವರ್ಗಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಡಯ್ಯ 164 ಮತಗಳು, ಹಿಂದುಳಿದ ಬ ವರ್ಗಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮುನಿಸ್ವಾಮಿ 171 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಕುರುಟ್ಟಿ ಹೊಸೂರು ಎರಡನೇ ಚುನಾವಣೆ ಕ್ಷೇತ್ರದಿಂದ ಹಿಂದುಳಿದ ಅ ವರ್ಗಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಣ್ಣಮ್ಮ 285 ಮತಗಳು, ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮುನಿಸಿದ್ದ 364 ಮತಗಳು ಮತ್ತು ಸಾಮನ್ಯ ಮಹಿಳೆ ಕ್ಷೇತ್ರಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹಂಸಲೇಖ 374 ಪಡೆದು ಜಯಶೀಲರಾಗಿದ್ದಾರೆ.

ಎಲ್‍ಪಿಎಸ್‍ಎ ಪ್ರಾಜೆಕ್ಟ್ ಚುನಾವಣಾ ಕ್ಷೇತ್ರದಿಂದ ಹಿಂದುಳಿದ ಅ ವರ್ಗಕ್ಕೆ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಮಹದೇವಮ್ಮ 241 ಮತಗಳು, ಸಾಮನ್ಯ ವರ್ಗದಿಂದ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ರವಿ 204 ಮತಗಳು ಮತ್ತು ಸಾಮಾನ್ಯ ಮಹಿಳೆ ಸ್ಥಾನದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಲಕ್ಷ್ಮೀ 200 ಮತಗಳನ್ನು ಪಡೆದು ಜಯಗಳಿಸಿದ್ದಾರೆ.ದಂಟಳ್ಳಿ ಒಂದನೇ ವಾರ್ಡ ಚುನಾವಣೆ ಕ್ಷೇತ್ರದಿಂದ ಸಾಮಾನ್ಯ ವರ್ಗದಿಂದ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಜಿ.ಬಸವರಾಜು 263 ಮತಗಳು ಹಾಗೂ ಸಾಮಾನ್ಯ ಮಹಿಳೆ ವರ್ಗದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಭ್ಯಾಗ 259

ಮತಗಳನ್ನು ಪಡೆದು ಜಯಗಳಿಸಿದ್ದಾರೆ.ದಂಟಳ್ಳಿ ಎರಡನೇ ಚುನಾವಣೆ ಕ್ಷೇತ್ರದಿಂದ ಅನುಸೂಚಿತ ಪಂಗಡಗಳು ಮಹಿಳೆ ವರ್ಗಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಚಿಕ್ಕತಾಯಮ್ಮ 321 ಮತಗಳು, ಸಾಮಾನ್ಯ ವರ್ಗಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಹದೇವಪ್ಪ 349 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ. ಚುನಾವಣೆಗೂ ಮುನ್ನ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಂದಸ್ವಾಮಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.  ಚಂಗಡಿ ಚುನಾವಣಾ ಕ್ಷೇತ್ರದಿಂದ ಅನುಸೂಚಿತ ಜಾತಿ ಮಹಿಳೆ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಭಾಗ್ಯ ಅವರು 208 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.ಮತ ಎಣಿಕೆ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

 

► Follow us on –  Facebook / Twitter  / Google+

Facebook Comments

Sri Raghav

Admin