ಬೀಜಿಂಗ್, ಜ. 8 – ನೈಋತ್ಯ ಚೀನಾದ ಚಾಂಗ್ಕಿಂಗ್ ನಗರ ಸಮೀಪದ ಕಫೆಟೀರಿಯದ ಸರ್ಕಾರಿ ಉಪಜಿಲ್ಲಾ ಕಚೇರಿಯಲ್ಲಿ ಸಂಭವಿಸಿದಸೋಟದಲ್ಲಿ 16 ಜನರು ಸಾವನ್ನಪ್ಪಿದ್ದಾರೆ ಮತ್ತು 10 ಮಂದಿ ಗಾಯಗೊಂಡಿದ್ದಾರೆ .
ಅನಿಲ ಸೋರಿಕೆ ಸೋಟಕ್ಕೆ ಶಂಕಿತ ಕಾರಣ ಎಂದು ಅಕಾರಿಗಳು ತಿಳಿಸಿದ್ದಾರೆ. ಸಿಬ್ಬಂದಿಗಳು ಊಟದ ಮಾಡುತ್ತಿದ್ದ ಸಮಯದಲಿ ಸ್ಟೋಟ ಸಂಭವಿಸಿದ್ದು ಕಛೇರಿಯ ಚಾವಣಿ ಕುಸಿದು ಹಲವರು ಒಳಗೆ ಸಿಲುಕಿ ಪ್ರಾಣಬಿಟ್ಟಿದ್ದಾರೆ ರಕ್ಷಣಾ ಕಾರ್ಯಕರ್ತರು ತಡರಾತ್ರಿಯವರೆಗೂ ನಡೆದು ಅವಶೇಷಗಳಡಿಯಿಂದ ಎಲ್ಲಾ ದೇಹಗಳನ್ನು ಹೊರತೆಗೆಯಲಾಯಿತು ಎಂದು ಸುದ್ದಿ ಸಂಸ್ಥೆ ವರ ಮಾಡಿದೆ
ಬದುಕುಳಿದವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಚಾಂಗ್ಕಿಂಗ್ ನಗರದಿಂದ ಪಶ್ಚಿಮಕ್ಕೆ 75 ಕಿಲೋಮೀಟರ್ ದೂರದಲ್ಲಿರುವ ಕಫೆಟೀರಿಯ ಪ್ರಕೃತಿ ಸೌಂದರ್ಯದ ತಾಣ ರಮಣೀಯ ಕಲ್ಲು ಬಂಡೆಗಳ ಮನಮೋಹಕ ರಚನೆಗಳಿಗೆ ಹೆಸರುವಾಸಿಯಾಗಿದೆ.
