ಮೆಕ್ಸಿಕೋ,ಜು.25-ಹೈಟಿ ದೇಶದ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮಗುಚಿಬಿದ್ದು 15 ಮಹಿಳೆಯರು, ಇಬ್ಬರು ಮಕ್ಕಳು ಸೇರಿ 17 ಮಂದಿ ಸಾವನ್ನಪ್ಪಿರುವ ದುರಂತ ಸಂಭವಿಸಿದೆ.
ಹೈಟಿ ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದಿಂದ ಬೇಸತ್ತು ಬೇರೆ ದೇಶಕ್ಕೆ ಜನ ಪಲಾಯನ ಮಾಡುತ್ತಿದ್ದು, ಪಲಾಯನದ ವೇಳೆ 60 ಜನರಿದ್ದ ಬೋಟ್ ನೀರಿನಲ್ಲಿ ಮುಳುಗಡೆಯಾಗಿ 17 ಜನ ಸಾವನ್ನಪ್ಪಿದ್ದಾರೆ.
ಮೃತ ದೇಹಗಳನ್ನು ಈಗಾಗಲೇ ಪತ್ತೆಮಾಡಿದ್ದು, 25 ಜನರನ್ನು ರಕ್ಷಿಸಲಾಗಿದೆ. ನ್ಯೂಪ್ರಾವಿಡೆನ್ಸ್‍ನಿಂದ ಏಳು ಮೈಲಿ ದೂರದಲ್ಲಿ ದೋಣಿ ಮುಳುಗಡೆಯಾಗಿದ್ದು, ಇನ್ನು ಹಲವು ಮಂದಿ ನಾಪತ್ತೆಯಾಗಿದ್ದಾರೆ.
ರಕ್ಷಿಸಲ್ಪಟ್ಟ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಹಮನ್ ಪ್ರಧಾನಿ ಡೇವಿಸ್ ತಿಳಿಸಿದ್ದಾರೆ.
60 ಜನರನ್ನು ಕರೆದೊಯ್ಯುತ್ತಿದ್ದ ಡಬಲ್ ಇಂಜಿನ್ ದೋಣಿ ನಿನ್ನೆ ರಾತ್ರಿ 1 ಗಂಟೆಗೆದ ಬಹಾಮಾನ್‍ನಿಂದ ಮಿಯಾಮಿಗೆ ಹೊರಟ್ಟಿತ್ತು. ಮಾನವ ಕಳ್ಳ ಸಾಗಾಣಿಕೆ ಅನುಮಾನದ ಮೇಲೆ ತನಿಖೆ ನಡೆಯುತ್ತಿದೆ. ನಮ್ಮ ಸರ್ಕಾರ ಬಂದ ಮೇಲೆ ಇಂಥ ಅಪಾಯಕಾರಿ ಪ್ರಕರಣಗಳ ವಿರುದ್ಧ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಹೈಟಿ ದೇಶದಲ್ಲಿ ಕೊಲೆ ಮತ್ತು ಅಪರಾಧ ಕೃತ್ಯಗಳ ಏರಿಕೆಯ ಮಧ್ಯೆ ಗ್ಯಾಂಗ್ ವಾರ್‍ಗಳು ಸಾಮಾನ್ಯವೆಂಬಂತೆ ನಡೆಯುತ್ತಿವೆ. ಸುರಕ್ಷಿತ ಜೀವನಕ್ಕಾಗಿ 11 ಮಿಲಿಯನ್‍ಗಿಂತಲೂ ಹೆಚ್ಚು ಜನ ಈಗಾಗಲೇ ಬೇರೆ ಕಡೆ ವಲಸೆ ಹೋಗುತ್ತಿದ್ದಾರೆ. ಈ ವರ್ಷ ಹಲವಾರು ದೋಣಿ ದುರಂತಗಳು ಸಂಭವಿಸಿವೆ. ಕಳೆದ ಮೇ ತಿಂಗಳಲ್ಲಿ ನಡೆದ ದೋಣಿ ದುರಂತದಲ್ಲಿ 11 ಜನ ಸಾವನ್ನಪ್ಪಿದ್ದರು.