18ರಂದು ಕಾವೇರಿ ತೀರ್ಪು : ಸುಪ್ರೀಂನತ್ತ ಚಿತ್ತ. ಅನ್ನದಾತರಲ್ಲಿ ಹೆಚ್ಚಿದ ದುಗುಡ, ಸರ್ಕಾರಕ್ಕೂ ತಲೆಬಿಸಿ

Kaveri

ಬೆಂಗಳೂರು,ಅ.12-ಕಾವೇರಿ ವಿವಾದ ಒಂದು ರೀತಿಯಲ್ಲಿ ತಾರ್ಕಿಕ ಅಂತ್ಯದ ಹಾದಿಯಲ್ಲಿದೆ. ಅ.18ರಂದು ಸುಪ್ರೀಂಕೋರ್ಟ್‍ನಲ್ಲಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮಹತ್ವದ ವಿಚಾರಣೆಗೆ ಬರಲಿರುವುದರಿಂದ ಮತ್ತೊಮ್ಮೆ ಎಲ್ಲರ ಚಿತ್ತ ಸುಪ್ರೀಂಕೋರ್ಟ್‍ನತ್ತ ನೆಟ್ಟಿದೆ.  ಕಳೆದ ಎರಡು ತಿಂಗಳಿನಿಂದ ರಾಜ್ಯ ಸರ್ಕಾರವನ್ನು, ರೈತರನ್ನೂ ಎಡಬಿಡದಂತೆ ಕಾಡಿದ್ದ ಕಾವೇರಿ ವಿವಾದ ಬಗೆಹರಿದಂತೆ ಕಂಡರೂ ಅಕ್ಟೋಬರ್ 18ರಂದು ಸುಪ್ರೀಂಕೋರ್ಟ್‍ನ ತ್ರಿಸದಸ್ಯ ಪೀಠದ ಮುಂದೆ ಅರ್ಜಿ ವಿಚಾರಣೆ ಬರಲಿದೆ. ಈ ಸಂದರ್ಭದಲ್ಲಿ ಮತ್ತೇನಾಗಲಿದೆಯೋ ಎಂಬ ದುಗುಡ ಎಲ್ಲರನ್ನು ಕಾಡತೊಡಗಿದೆ.  ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ಆರು ತೀರ್ಪುಗಳೂ ರಾಜ್ಯದ ವಿರುದ್ಧವಾಗಿ ಬಂದು ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದ್ದಲ್ಲದೆ ರೈತರನ್ನು ಕಂಗೆಡಿಸಿದ್ದವು.

ರಾಜ್ಯದ ಜನ ಕಂಗಾಲಾಗಿ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಿದ್ದರು. ಎಲ್ಲ ರಾಜಕೀಯ ಪಕ್ಷಗಳು ಒಂದಾಗಿ ಕಾವೇರಿ ಪರವಾಗಿ ನಿಂತಿದ್ದವು. ಸರ್ಕಾರ ಕಾವೇರಿ ವಿಷಯವಾಗಿ ಎರಡು ವಿಶೇಷ ಅಧಿವೇಶನಗಳನ್ನು ಕರೆದು ಮಹತ್ವದ ನಿರ್ಧಾರವನ್ನು ಕೈಗೊಂಡಿತ್ತು.  ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿಗೆ ಕೇಂದ್ರ ಸರ್ಕಾರ ಆಕ್ಷೇಪಣೆ ಸಲ್ಲಿಸಿ ಮಂಡಳಿ ರಚನೆಯಿಂದ ಹಿಂದೆ ಸರಿದಿದ್ದರಿಂದ ಕೊಂಚ ರಿಲೀಫ್ ಸಿಕ್ಕಿತ್ತು.  ಸುಪ್ರೀಂಕೋರ್ಟ್ ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡುವಂತೆ ತಾಂತ್ರಿಕ ಸಮಿತಿಗೆ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್.ಝಾ ನೇತೃತ್ವದ ಸಮಿತಿ ಉಭಯ ರಾಜ್ಯಗಳ ಕಾವೇರಿ ಕೊಳ್ಳದ ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡಿದ್ದು ಸುಪ್ರೀಂಕೋರ್ಟ್‍ಗೆ ವರದಿ ಸಲ್ಲಿಸಬೇಕಿದೆ.

ಸೆ.18ರಂದು ರಾಜ್ಯ ಸರ್ಕಾರ ಕಾವೇರಿ ನ್ಯಾಯಾಧೀಕರಣದ ಐತೀರ್ಪುನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ ನಡೆಯಲಿರುವುದರಿಂದ ಸರ್ಕಾರ ಸರ್ವಪಕ್ಷಗಳ ಸಭೆ, ನಿವೃತ್ತ ನ್ಯಾಯಾಧೀಶರೊಂದಿಗೆ ಸಮಾಲೋಚನೆ, ಹಿರಿಯ ಮುಖಂಡರೊಂದಿಗೆ ಚರ್ಚೆ, ನ್ಯಾಯವಾದಿಗಳೊಂದಿಗೆ ಮಾತುಕತೆ ನಡೆಸಿ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದೆ.
ಸೆ.18ರ ಸುಪ್ರೀಂಕೋರ್ಟ್ ವಿಚಾರಣಾ ಸಂದರ್ಭದಲ್ಲಿ ರಾಜ್ಯಕ್ಕೆ ನ್ಯಾಯ ಸಿಗುವ ವಿಶ್ವಾಸದ ಹಿನ್ನೆಲೆಯಲ್ಲಿ ಕಾವೇರಿ ವಿಚಾರದಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ಪ್ರತಿಬಾರಿ ತಮಿಳುನಾಡು ಸರ್ಕಾರ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಸುವ ಆಕ್ಷೇಪಕ್ಕೆ ತಕ್ಕ ಉತ್ತರಗಳನ್ನು ಇತ್ತೀಚೆಗೆ ನೀಡಿದೆ. ಕಾವೇರಿ ಕೊಳ್ಳದ ವಾಸ್ತಾಂಶವನ್ನು ಕೂಡ ಸುಪ್ರೀಂಕೋರ್ಟ್‍ಗೆ ಮನವರಿಕೆ ಮಾಡಿಕೊಟ್ಟಿದೆ. ಹಾಗಾಗಿ 18ರ ಸುಪ್ರೀಂಕೋರ್ಟ್‍ನ ವಿಚಾರಣೆಯಲ್ಲಿ ನ್ಯಾಯದ ಭರವಸೆಯ ನಿರೀಕ್ಷೆಯನ್ನು ಹೊಂದಿದೆ.
ಮತ್ತೊಮ್ಮೆ ಎಲ್ಲರ ಗಮನ ಸುಪ್ರೀಂಕೋರ್ಟ್‍ನತ್ತ ನೆಟ್ಟಿದೆ.

► Follow us on –  Facebook / Twitter  / Google+

Sri Raghav

Admin