18 ದಶಲಕ್ಷ ದೀಪಗಳ ಕಲ್ಪನಾ ಲೋಕವನ್ನು ನೀವು ನೋಡಿ ಕಣ್ತುಂಬಿಕೊಳ್ಳಿ..!

ds

ತಮಸೋಮ ಜೋತಿರ್ಗ ಮಯ.. ಕತ್ತಲಿನಿಂದ ಬೆಳಕಿನೆಡೆಗೆ.. ಪ್ರಭೆಯ ಈ ಮಹತ್ವ ವಿಶ್ವದ ಎಲ್ಲ ರಾಷ್ಟ್ರಗಳಿಗೂ ಅನ್ವಯಿಸುತ್ತದೆ. ಆದರೆ ಇದನ್ನು ಆಯಾ ನೆಲೆಗಟ್ಟಿನಲ್ಲಿ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಚೀನಾದಲ್ಲಿ 18 ದಶಲಕ್ಷ ದೀಪಗಳಿಗೆ ಸೃಷ್ಟಿಯಾದ ಕಲ್ಪನಾ ಲೋಕ ಇದೇ ಸಂದೇಶ ಸಾರುವಂತಿತ್ತು.  ಚೀನಾದ ಸಿಚುವಾನ್ ಪ್ರಾಂತ್ಯದ ಗ್ರಾಮವೊಂದರಲ್ಲಿ ಕಂಡು ಬಂದು ದೇದೀಪ್ಯಮಾನ ದೃಶ್ಯವಿದೆ. ಕಾರ್ಮಿಕ ದಿನಾಚರಣೆ ದಿನದಿಂದ ಆರಂಭವಾಗಿರುವ ಸುಮಾರ್ 18 ದಶಲಕ್ಷ ದೀಪಗಳ ಈ ವರ್ಣರಂಜಿತ ದೃಶ್ಯ ಕಲ್ಪನಾ ಲೋಕದ ಸೃಷ್ಟಿಯಂತಿತ್ತು.

ಯಿಲೆ ಪಟ್ಟಣದ ಕ್ವಿಂಗ್‍ಲಾಂಗ್ ಗ್ರಾಮದಲ್ಲಿ ನಡೆದ ಬೆಳಕಿನ ಪ್ರದರ್ಶನದಲ್ಲಿ 14 ಥೀಮ್‍ಗಳ ಪರಿಕಲ್ಪನೆಯ ಪ್ರಭೆಯ ಚಿತ್ತಾರಗಳು ಪ್ರೇಕ್ಷಕರ ಮನಸೂರೆಗೊಂಡವು. 26 ಮೀಟರ್‍ಗಳ ಟೈಮ್ ಟನಲ್ ಎಂಬ ಕಾಲ ಸುರಂಗ ಮತ್ತು ಕಲ್ಪನಾ ಸರೋವರ ಹೆಸರಿನ ಬೆಳಕಿನ ದೃಶ್ಯ ಕಾವ್ಯಕ್ಕೆ ಸಹಸ್ರಾರು ಮಂದಿ ಬೆರಗಾದರು.  ನೌಕೆಗಳು, ಜೆಲ್ಲಿಫಿಶ್ ಮತ್ತು ಡಾಲ್ಫಿನ್‍ಗಳೂ ಸೇರಿದಂತೆ ಕಮಲ ಕೊಳದಲ್ಲಿ ಬೆಳಕಿನ ರಚನೆ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಜುಲೈ ತಿಂಗಳಾಂತ್ಯದ ತನಕ ಈ ಲೈಟ್ ಶೋ ಪ್ರದರ್ಶನಗೊಳ್ಳಲಿದೆ.

Sri Raghav

Admin