ಅಕ್ರಮವಾಗಿ ನೆಲೆಸಿದ್ದ 18 ಬಾಂಗ್ಲಾ aಪ್ರಜೆಗಳ ಬಂಧನ

Social Share

ಥಾಣೆ,ಮಾ.4- ಮಹಾರಾಷ್ಟ್ರದಲ್ಲಿ ಅಕ್ರಮವಾಗಿ ನೆಲೆಯೂರಿದ್ದ 18 ಬಾಂಗ್ಲಾ ದೇಶದ ಪ್ರಜೆಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ನವಿ ಮುಂಬೈನ ಘನ್ಸೋಲಿ ಪ್ರದೇಶದಲ್ಲಿ ಜರುಗುತ್ತಿದ್ದ ವಿವಾಹ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಕ್ರಮ ಬಾಂಗ್ಲಾ ಪ್ರಜೆಗಳು ಪಾಲ್ಗೊಳ್ಳುತ್ತಾರೆ ಎಂಬ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ 10 ಮಹಿಳೆಯರು ಸೇರಿ 18 ಮಂದಿ ಅಕ್ರಮ ಬಾಂಗ್ಲಾವಾಸಿಗಳನ್ನು ಬಂಧಿಸಲಾಗಿದೆ ರಬಳೆ ಪೊಲೀಸ್ ಠಾಣೆಯ ಅಕಾರಿ ತಿಳಿಸಿದ್ದಾರೆ.

ವೀಸಾ ಮತ್ತು ಪಾಸ್‍ಪೋರ್ಟ್‍ನಂತಹ ಯಾವುದೇ ಮಾನ್ಯ ದಾಖಲೆಗಳಿಲ್ಲದೆ ಕಳೆದ ಒಂದು ವರ್ಷದಿಂದ ಈ ಪ್ರದೇಶದಲ್ಲಿ ನೆಲೆಸಿರುವುದು ಕಂಡುಬಂದಿದ್ದರಿಂದ ಹತ್ತು ಮಹಿಳೆಯರು ಮತ್ತು ಎಂಟು ಪುರುಷರನ್ನು ಕಾರ್ಯಾಚರಣೆಯ ಸಮಯದಲ್ಲಿ ಬಂಧಿಸಲಾಗಿದೆ ಎಂದು ಅವರು ಹೇಳಿದರು.

ವಿದೇಶಿಯರ ಕಾಯಿದೆ, 1946 ಮತ್ತು ಪಾಸ್‍ಪೋರ್ಟ್ (ಭಾರತಕ್ಕೆ ಪ್ರವೇಶ) ನಿಯಮಗಳು, 1950 ರ ಅಡಿಯಲ್ಲಿ ಅವರ ವಿರುದ್ಧ ಅಪರಾಧವನ್ನು ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಪೋಲೀಸರು ತಿಳಿಸಿದ್ದಾರೆ.

18 Bangladeshi, Nationals, Arrested, Maharashtra, Illegal Stay,

Articles You Might Like

Share This Article